ತಮಿಳುನಾಡಿನ ಮಧುರೈನಲ್ಲಿ ಬ್ಯಾಂಕೊಂದರಲ್ಲಿ ಕೆಲಸ ಮಾಡಲು ಹುದ್ದೆಗಳು ಖಾಲಿ ಇರುವ ಜಾಹೀರಾತೊಂದು ವೈರಲ್ ಆಗಿತ್ತು. ನೇರ ಸಂದರ್ಶನಕ್ಕೆ ಆಹ್ವಾನವಿರುವ ಈ ಜಾಹೀರಾತಿನಲ್ಲಿ 2021ರಲ್ಲಿ ಪದವಿ ಪೂರೈಸಿದ ಅಭ್ಯರ್ಥಿಗಳು ಅರ್ಹರಲ್ಲ ಎಂಬ ವಾಕ್ಯವೊಂದು ಹೀಗೆ ವೈರಲ್ ಆಗಲು ಕಾರಣವಾಗಿತ್ತು.
2021ರಲ್ಲಿ ಪದವಿ ಪೂರೈಸಿದ ಅಭ್ಯರ್ಥಿಗಳನ್ನು ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲವೇ ? ಎಂಬೆಲ್ಲಾ ಪ್ರಶ್ನೆಗಳು ಕಾಮೆಂಟ್ಗಳ ರೂಪದಲ್ಲಿ ಹರಿದಾಡತೊಡಗಿದವು. ಮಾರಾಟ ವಿಭಾಗದ ಶಾಖಾಧಿಕಾರಿಯ ಹುದ್ದೆಗೆ ಆಹ್ವಾನಿಸಿ ಈ ಜಾಹೀರಾತು ಪ್ರಕಟಿಸಲಾಗಿದೆ.
ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಗುಡ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ
ಇದೀಗ ಈ ವಿಚಾರದ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಜಾಹೀರಾತು ಪ್ರಕಟಿಸಿದ ಎಚ್ಡಿಎಫ್ಸಿ ಬ್ಯಾಂಕ್, “ಇದೊಂದು ಟೈಪಿಂಗ್ ದೋಷವಾಗಿದ್ದು, ಇದಕ್ಕಾಗಿ ವಿಷಾದಿಸುತ್ತೇವೆ. ವಯೋಮಾನದ ಮಿತಿಗಳ ಒಳಗೆ ಇರುವ ಅಭ್ಯರ್ಥಿಗಳು ಯಾವುದೇ ವರ್ಷದಲ್ಲಿ ಪದವಿ ಪೂರೈಸಿದ್ದರೂ ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ” ಎಂದು ಸ್ಪಷ್ಟಪಡಿಸಿದೆ.