ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಗಿಟ್ಟಿಸಲು ತಾನೊಬ್ಬ ಇನ್‌ಸ್ಟಾಗ್ರಾಂ ಇನ್‌ಫ್ಲುಯೆನ್ಸರ್ ಎಂದು ಹೇಳಿಕೊಳ್ಳುವ ಸೆರ್ಜಿ ಕೊಸೆಂಕೋ ಎಂಬ ಈತ ಮಾಸ್ಕೋದ ಬೀದಿಗಳಲ್ಲಿ ತನ್ನ ಗರ್ಲ್‌ಫ್ರೆಂಡ್ ಅನ್ನು ಕಾರಿನ ಮೇಲ್ಛಾವಣಿಗೆ ಕಟ್ಟಿ ಹಾಕಿ ಅಡ್ಡಾಡಿದ್ದಾನೆ.
ಐದು ಲಕ್ಷಕ್ಕೂ ಅಧಿಕ ಫಾಲೋವರ್‌ಗಳು ಈತನಿಗೆ ಇದ್ದು, ಇದೊಂದು ’ನಂಬಿಕೆ ಪರೀಕ್ಷೆ’ ಎಂದು ಸೆರ್ಜಿ ಹೇಳಿಕೊಂಡಿದ್ದಾನೆ.
BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಏರಿಕೆ; 24 ಗಂಟೆಯಲ್ಲಿ 562 ಜನರು ಮಹಾಮಾರಿಗೆ ಬಲಿ
ಈತನ ಈ ಹುಚ್ಚಾಟಕ್ಕೆ 750 ರೂಬಲ್ ದಂಡ ವಿಧಿಸಿರುವ ಮಾಸ್ಕೋ ಸಂಚಾರಿ ಪೊಲೀಸರು ಪ್ರಕರಣದ ಸಂಬಂಧ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.