ಬೆಂಗಳೂರು: ಕೊನೆಗೂ ನೂತನ ಸಂಪುಟ ರಚನೆಗೆ ಮೂಹೂರ್ತ ಫಿಕ್ಸ್ ಆಗಿದೆ. ಯಾರೆಲ್ಲ ಕ್ಯಾಬಿನೇಟ್ ಗೆ ಸೇರ್ಪಡೆಯಾಗಲಿದ್ದಾರೆ ಎಂಬ ಕೂತಹಲಕ್ಕೆ ಬಹುತೇಕ ತೆರೆಬಿದ್ದಿದ್ದು, ಸ್ವತಃ ಸಿಎಂ ಬೊಮ್ಮಾಯಿ ಅವರೇ ನೂತನ ಸಚಿವರಿಗೆ ಕರೆ ಮಾಡಿ ಪ್ರಮಾಣವಚನಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ.
BIG BREAKING: ಡಿಸಿಎಂ ಸ್ಥಾನದ ನಿರೀಕ್ಷೆಯಲ್ಲಿದ್ದವರಿಗೆ ಬಿಜೆಪಿ ಹೈಕಮಾಂಡ್ ಬಿಗ್ ಶಾಕ್..?
ಈ ನಡುವೆ ಮಾಜಿ ಸಚಿವ ಗೋವಿಂದ ಕಾರಜೋಳ, ಕೆ.ಎಸ್.ಈಶ್ವರಪ್ಪಗೆ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಸಿಗುವುದು ಖಚಿತವಾಗಿದೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕಾರಜೋಳ, ನನಗೆ ಮುಖ್ಯಮಂತ್ರಿಗಳು ಖುದ್ದು ಕರೆ ಮಾಡಿದ್ದಾರೆ. ಪ್ರಮಾಣವಚನಕ್ಕೆ ಬರುವಂತೆ ಆಹ್ವಾನ ಬಂದಿದೆ ಎಂದು ಹೇಳಿದ್ದಾರೆ.
ಪ್ರಮಾಣವಚನಕ್ಕೆ ಕರೆ ಬಂದವರ ಪಟ್ಟಿ ಹೀಗಿದೆ:
ಗೋವಿಂದ ಕಾರಜೋಳ
ಬಿ.ಸಿ.ಪಾಟೀಲ್
ಕೆ.ಎಸ್.ಈಶ್ವರಪ್ಪ
ಬಿ.ಶ್ರೀರಾಮುಲು
ಅರಗ ಜ್ನಾನೇಂದ್ರ
ಎಸ್.ಅಂಗಾರ
ಪೂರ್ಣಿಮಾ ಶ್ರೀನಿವಾಸ್
ಬೈರತಿ ಬಸವರಾಜ್
ಉಮೇಶ್ ಕತ್ತಿ
ಡಾ.ಕೆ.ಸುಧಾಕರ್
ಅರವಿಂದ ಲಿಂಬಾವಳಿ
ಆರ್.ಅಶೋಕ್
ಆನಂದ್ ಸಿಂಗ್
ವಿ.ಸೋಮಣ್ಣ
ಡಾ.ಅಶ್ವತ್ಥನಾರಾಯಣ
ಶಿವರಾಮ್ ಹೆಬ್ಬಾರ್
ಎಸ್.ಟಿ.ಸೋಮಶೇಖರ್
ಮುನಿರತ್ನ
ಮಾಧುಸ್ವಾಮಿ
ಕೆ.ಗೋಪಾಲಯ್ಯ
ಸುನೀಲ್ ಕುಮಾರ್
ಪ್ರಭು ಚೌವ್ಹಾಣ್