ಟೆಸ್ಲಾ ಕಾರುಗಳಲ್ಲಿ ಎದ್ದು ಕಾಣುವ ಫೀಚರ್ಗಳಲ್ಲಿ ಒಂದಾದ ಆಟೋಪೈಲಟ್ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟ್ರೆಂಡ್ ಆಗಿದೆ. ಈ ಫೀಚರ್ ಹೇಗೆ ಕೆಲಸ ಮಾಡುತ್ತದೆ ಎಂದ ತೋರುವ ವಿಡಿಯೋಗಳು ಹಾಗೂ ಫೋಟೋಗಳು ಬಹಳಷ್ಟು ವೈರಲ್ ಆಗಿವೆ.
ಕುಡಿದ ಮತ್ತಿನಲ್ಲಿ ತನ್ನ ಟೆಸ್ಲಾ ವಾಹನ ಚಾಲನೆ ಮಾಡಲು ಬಂದ 24 ವರ್ಷ ವಯಸ್ಸಿನ ನಾರ್ವೇಯನ್ ಚಾಲಕನೊಬ್ಬನನ್ನು ಮಾರಣಾಂತಿಕ ಅಪಘಾತದಿಂದ ಪಾರು ಮಾಡಿದೆ ಇದೇ ಆಟೋಪೈಲಟ್ ಫೀಚರ್.
ಚೀನಿ ಬೆಟ್ಟಿಂಗ್ ಆಪ್ ಗಳಿಗೆ ಹಣ ವರ್ಗಾವಣೆ: ರೇಜೋರ್ಪೇ, ಪೇಟಿಎಂ, ಬಿಲ್ ಡೆಸ್ಕ್ ಮೇಲೆ ED ಹದ್ದಿನ ಕಣ್ಣು
ಚಾಲಕ ನಿಷ್ಕ್ರಿಯನಾಗಿದ್ದಾನೆ ಎಂದು ಅರಿತ ಆಟೋಪೈಲಟ್ ಕಾರನ್ನು ತನ್ನ ಪಥದಲ್ಲೇ ನಿಲ್ಲಿಸುವ ಮೂಲಕ ಬೇರೆ ಪಥಗಳಲ್ಲಿ ಬರುತ್ತಿದ್ದ ವಾಹನಗಳಿಗೆ ಗುದ್ದದಂತೆ ನೋಡಿಕೊಂಡಿದೆ. ಜೊತೆಗೆ ತುರ್ತು ಸೇವೆಗಳನ್ನು ಸಹ ಅಲರ್ಟ್ ಮಾಡಿದೆ ಈ ಫೀಚರ್. ಈ ಕಾರಿನ ಪಕ್ಕ ಚಲಿಸುತ್ತಿದ್ದ ಮತ್ತೊಂದು ವಾಹನದಲ್ಲಿದ್ದ ಮಂದಿ ಈ ವಿಡಿಯೋ ರೆಕಾರ್ಡ್ ಮಾಡಿದ್ದಾರೆ.
https://twitter.com/AustinTeslaClub/status/1421532778097782784?ref_src=twsrc%5Etfw%7Ctwcamp%5Etweetembed%7Ctwterm%5E1421532778097782784%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Fviral-tesla-autopilot-saves-life-of-drunk-driver-who-passed-out-at-wheel-video-surfaces-online%2F793828