alex Certify ಮನೆಯಲ್ಲೇ ಕುಳಿತು SBI ಇಂಟರ್ನೆಟ್​ ಬ್ಯಾಂಕಿಂಗ್​ ರಿಜಿಸ್ಟರ್​​ ಮಾಡಲು ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲೇ ಕುಳಿತು SBI ಇಂಟರ್ನೆಟ್​ ಬ್ಯಾಂಕಿಂಗ್​ ರಿಜಿಸ್ಟರ್​​ ಮಾಡಲು ಇಲ್ಲಿದೆ ಮಾಹಿತಿ

ದೇಶದ ಪ್ರತಿಷ್ಟಿತ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ತನ್ನ ಗ್ರಾಹಕರಿಗೆ ಆನ್​ಲೈನ್​ ಬ್ಯಾಂಕಿಂಗ್​ ಸೇವೆಯ ಮೂಲಕ ಸಾಕಷ್ಟು ಸೌಕರ್ಯಗಳನ್ನು ನೀಡುತ್ತಿದೆ.

ಆನ್​ಲೈನ್​ ಬ್ಯಾಂಕಿಂಗ್​ ಬಳಕೆಯ ಮೂಲಕ ಬ್ಯಾಂಕ್​ಗೆ ಭೇಟಿ ನೀಡುವುದನ್ನ ಕಡಿಮೆ ಮಾಡಬಹುದಾಗಿದೆ. ಎಸ್.ಬಿ.ಐ. ಇಂಟರ್ನೆಟ್​ ಬ್ಯಾಂಕಿಂಗ್​​ಗೆ ಆನ್​ಲೈನ್​ ರಿಜಿಸ್ಟ್ರೇಷನ್​​ ಆಗುವ ಬಗ್ಗೆ ಇಲ್ಲಿದೆ ಮಾಹಿತಿ :

ಇಂಟರ್ನೆಟ್​ ಬ್ಯಾಂಕಿಂಗ್ ಸೌಲಭ್ಯವನ್ನು ಪಡೆಯಲು ಗ್ರಾಹಕರು ಎಸ್​ಬಿಐನಲ್ಲಿ ಕನಿಷ್ಟ 1 ಬ್ಯಾಂಕ್​ ಖಾತೆಯನ್ನು ಹೊಂದಿರಬೇಕು.

– ಎಸ್​ಬಿಐ ಹೋಂ ಪೇಜ್​​ನಲ್ಲಿ ಪರ್ಸನಲ್​​ ಬ್ಯಾಂಕಿಂಗ್​ ವಿಭಾಗಕ್ಕೆ ಹೋಗಿ.

– ಇದರಲ್ಲಿ ನ್ಯೂ ಯೂಸರ್​ ರಿಜಿಸ್ಟ್ರೇಷನ್​ ಲಿಂಕ್​ ಮೇಲೆ ಕ್ಲಿಕ್ ಮಾಡಿ.

– ಹೊಸ ನೋಂದಣಿಯಾಗಿ, ನ್ಯೂ ಯೂಸರ್​ ರೆಜಿಸ್ಟ್ರೇಷನ್​ ಮೇಳೆ ಕ್ಲಿಕ್​ ಮಾಡಿ.

– ನ್ಯೂ ಯೂಸರ್​ ರಿಜಿಸ್ಟ್ರೇಷನ್​​ನಲ್ಲಿ ಕಂಟಿನ್ಯೂ ಆಯ್ಕೆ ಕ್ಲಿಕ್​ ಮಾಡಿ.

– ನಿಮ್ಮ ಪಾಸ್​ಬುಕ್​ನಲ್ಲಿರುವ ಸಿಐಎಫ್​ ಸಂಖ್ಯೆಯನ್ನು ನಮೂದಿಸಿ. ಹಾಗೆಯೇ ಬ್ರ್ಯಾಂಚ್​ ಕೋಡನ್ನೂ ನಮೂದಿಸಿ.

– ನಿಮ್ಮ ರಿಜಿಸ್ಟರ್​ ಮೊಬೈಲ್​ ನಂಬರ್​ನ್ನು ನಮೂದಿಸಿ.

– ಇಂಟರ್ನೆಟ್​ ಬ್ಯಾಂಕಿಂಗ್​​ ಸೌಲಭ್ಯಗಳನ್ನು ಆಯ್ಕೆ ಮಾಡಿಕೊಳ್ಳಿ.

– ಕ್ಯಾಪ್ಚಾ ಕೋಡ್​​ ಹಾಕಿ ಬಳಿಕ ಸಬ್​ಮಿಟ್​ ಆಯ್ಕೆ ಒತ್ತಿರಿ.

– ನಿಮ್ಮ ಬಳಿ ಎಟಿಎಂ ಕಾರ್ಡ್ ಇದ್ದಲ್ಲಿ ನೀವು ರಿಜಿಸ್ಟ್ರೇಷನ್​ ಪೂರ್ತಿ ಮಾಡಿ ಹಾಗೂ ಇಂಟರ್ನೆಟ್​ ಬ್ಯಾಂಕಿಂಗ್​ ಸೇವೆಯನ್ನು ಬಳಸಬಹುದಾಗಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...