
ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ಕಿಸಾನ್) ಯೋಜನೆಯ 9 ನೇ ಕಂತಿಗೆ ಕಾಯುತ್ತಿರುವ ಲಕ್ಷಾಂತರ ರೈತರು ಮುಂದಿನ ವಾರ ನೆಮ್ಮದಿಯ ನಿಟ್ಟುಸಿರು ಬಿಡಬಹುದು.
ಪಿಎಂ ಕಿಸಾನ್ ಯೋಜನೆಯು ಕೃಷಿ ಭೂಮಿಯನ್ನು ಹೊಂದಿರುವ ದೇಶಾದ್ಯಂತ ಎಲ್ಲ ಭೂಮಾಲೀಕ ರೈತ ಕುಟುಂಬಗಳಿಗೆ ವಾರ್ಷಿಕ 6000 ರೂಪಾಯಿ ಒದಗಿಸುವ ಗುರಿ ಹೊಂದಿದೆ. PM ಕಿಸಾನ್ ಕಂತನ್ನು ಮೂರು ಬಾರಿ ಜಮಾ ಮಾಡಲಾಗುತ್ತದೆ. ಏಪ್ರಿಲ್-ಜುಲೈನಿಂದ ಅವಧಿ 1, ಆಗಸ್ಟ್ ನಿಂದ ನವೆಂಬರ್ ವರೆಗೆ ಅವಧಿ 2, ಮತ್ತು ಡಿಸೆಂಬರ್ ನಿಂದ ಮಾರ್ಚ್ ವರೆಗೆ ಅವಧಿ 3 ರಲ್ಲಿ ಕಂತು ಜಮಾ ಮಾಡಲಾಗುವುದು.
ವರದಿಗಳ ಪ್ರಕಾರ, ಪಿಎಂ ಕಿಸಾನ್ ನ 9 ನೇ ಕಂತನ್ನು ಆಗಸ್ಟ್ 9 ರಂದು ರೈತರ ಖಾತೆಗೆ ಜಮಾ ಮಾಡಲಾಗುತ್ತದೆ. ಉತ್ತರ ಪ್ರದೇಶದ ರೈತರಿಗೆ ಆಗಸ್ಟ್ 5 ರಂದು, ಮಧ್ಯಪ್ರದೇಶದ ರೈತರಿಗೆ ಆಗಸ್ಟ್ 7 ರಂದು ಹಣ ಸಿಗಲಿದೆ.
ನಿಮ್ಮ ಹೆಸರನ್ನು ಪಿಎಂ ಕಿಸಾನ್ ವೆಬ್‌ಸೈಟ್ ಮೂಲಕ ಮತ್ತು ಮೊಬೈಲ್ ಆಪ್ ಬಳಸಿ ಪರಿಶೀಲಿಸಬಹುದು. ಈ https://pmkisan.gov.in/BeneficiaryStatus.aspx ಲಿಂಕ್ ಗೆ ಲಾಗಿನ್ ಮಾಡುವ ಮೂಲಕ ವಿವರ ಪರಿಶೀಲಿಸಬಹುದು
– ಮೂರು ವಿಧಾನಗಳ ಮೂಲಕ ಕ್ರೆಡಿಟ್ ವಿವರ ಪರಿಶೀಲಿಸಬಹುದು.
- ಆಧಾರ್ ಸಂಖ್ಯೆ
- ಖಾತೆ ಸಂಖ್ಯೆ
- ಮೊಬೈಲ್ ಸಂಖ್ಯೆ
– ನಿಮಗೆ ಬೇಕಾದ ಪಟ್ಟಿಯಲ್ಲಿ ಕ್ಲಿಕ್ ಮಾಡಿ ಮತ್ತು ಎಂಟರ್ ಒತ್ತಿರಿ. ಈ ಮೂಲಕ ನೀವು ನಿಮ್ಮ ವಿವರಗಳನ್ನು ಪರಿಶೀಲಿಸಬಹುದು.