ಬೇಕಾಗುವ ಸಾಮಾಗ್ರಿಗಳು: ನೇಂದ್ರ ಬಾಳೆಕಾಯಿ ಸಿಪ್ಪೆ, ಕಾಯಿತುರಿ- ಸ್ವಲ್ಪ, ಎಣ್ಣೆ- 2 ಟೀ ಸ್ಪೂನ್, ಉದ್ದಿನಬೇಳೆ- ಸ್ವಲ್ಪ, ಕಡಲೇಬೇಳೆ- ಸ್ವಲ್ಪ, ಸಾಸಿವೆ- ಸ್ವಲ್ಪ, ಒಣಮೆಣಸು-2, ಈರುಳ್ಳಿ-1, ಕರಿಬೇವುಸೊಪ್ಪು, ಬೆಳ್ಳುಳ್ಳಿ- 2 ಎಸಳು, ರುಚಿಗೆ ತಕ್ಕಷ್ಟು ಉಪ್ಪು, ಸಾಂಬಾರ್ ಪೌಡರ್, ಮೆಣಸಿನ ಹುಡಿ
ಆಂಧ್ರ ಸಿಎಂ ಜಗನ್ ರೆಡ್ಡಿ ಚಿಕ್ಕಪ್ಪನ ಹಂತಕರು ಸಿಬಿಐ ಬಲೆಗೆ…..!
ಮಾಡುವ ವಿಧಾನ: ಬಾಳೆಕಾಯಿಯಲ್ಲಿ ಚಿಪ್ಸ್ ಮಾಡಿದ್ದರೆ ಅದನ್ನು ಬಿಸಾಡದೆ ಈ ರೀತಿ ಪಲ್ಯ ಮಾಡಬಹುದು. ಆ ಸಿಪ್ಪೆಯನ್ನು ಸಣ್ಣಗೆ ಹೆಚ್ಚಿರಿ. ಬಳಿಕ ಇದನ್ನು ನೀರಿಗೆ ಹಾಕಿಡಿ. ಒಂದು ಬಾಣಲೆಯನ್ನು ಸ್ಟೌ ಮೇಲಿಟ್ಟು 2 ಟೀ ಸ್ಪೂನ್ ಎಣ್ಣೆ, ಅದಕ್ಕೆ ಉದ್ದಿನಬೇಳೆ, ಕಡಲೇಬೇಳೆ, ಸಾಸಿವೆ, ಒಣಮೆಣಸು, ಜಜ್ಜಿದ ಬೆಳ್ಳುಳ್ಳಿ ಹಾಕಿ. ಸಾಸಿವೆ ಸಿಡಿದ ಕೂಡಲೇ ಕರಿಬೇವುಸೊಪ್ಪು ಹಾಕಿ ಬಳಿಕ ಹೆಚ್ಚಿದ ಈರುಳ್ಳಿ ಹಾಕಿ ಫ್ರೈ ಮಾಡಿ. ನಂತರ ಬಾಳೆಕಾಯಿ ಸಿಪ್ಪೆಯನ್ನು ಸೋಸಿ ಬಾಣಲೆಗೆ ಹಾಕಿ ಮಿಕ್ಸ್ ಮಾಡಿ ಬೇಯಿಸಿ,
ಸ್ವಲ್ಪ ನೀರು ಹಾಕಿಕೊಳ್ಳಿ. ಬೇಯುತ್ತಾ ಬರುವಾಗ ಸ್ವಲ್ಪ ಕಾಯಿತುರಿ, ರುಚಿಗೆ ತಕ್ಕಷ್ಟು ಉಪ್ಪು, ಸಾಂಬಾರ್ ಪೌಡರ್, ಮೆಣಸಿನ ಹುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಚೆನ್ನಾಗಿ ಬೆಂದ ಕೂಡಲೇ ಸರ್ವಿಂಗ್ ಬೌಲ್ ಗೆ ಹಾಕಿದರೆ ಅನ್ನದ ಜೊತೆ ಸವಿಯಲು ರುಚಿಯಾದ ಬಾಳೆಕಾಯಿ ಸಿಪ್ಪೆಯ ಪಲ್ಯ ರೆಡಿ.