ನಿಮ್ಮ ಮೊಬೈಲ್ ಮೇಲಿನಿಂದ ಕೆಳಕ್ಕೆ ಬಿದ್ದರೆ ಒಂದುಕ್ಷಣ ನಿಮ್ಮ ಹೃದಯ ಬಡಿತವೇ ನಿಂತು ಹೋದ ಅನುಭವವಾಗುತ್ತದೆ. ಕೂಡಲೇ ಮೊಬೈಲ್ ಏನಾಗಿದೆ ಎಂಬುದನ್ನು ಪರಿಶೀಲಿಸುತ್ತೇವೆ. ಅಂಥಾದ್ರಲ್ಲಿ ನದಿಯಲ್ಲೋ, ಸಾಗರದಲ್ಲೋ ಫೋನ್ ಕಳೆದುಹೋದರೆ ಸಿಗುತ್ತದೆಯೇ..? ಬಹುಶಃ ಖಂಡಿತ ಇಲ್ಲ ಅಲ್ಲವೆ..? ಆದರೆ ಇಲ್ಲೊಬ್ಬ ವ್ಯಕ್ತಿಯು ಅದೃಷ್ಟಶಾಲಿಯಾಗಿದ್ದಾನೆ.
ಹೌದು, ಶೇನ್ ಸ್ಟೀಫನ್ ಎಂಬ ವ್ಯಕ್ತಿ ನಿಧಿಗಾಗಿ ಸ್ಕಾಟಿಷ್ ನದಿಯ ತಳದಲ್ಲಿ ಹುಡುಕುತ್ತಿರಬೇಕಾದರೆ ಐಫೋನ್ ಸಿಕ್ಕಿದೆ. ಕೂಡಲೇ ತಪಾಸಣೆ ನಡೆಸಿದಾಗ ಫೋನಿನ ಸಿಮ್ ಕಾರ್ಡ್ ಹಾಗೆ ಇತ್ತು ಹಾಗೂ ಯಾವುದೇ ರೀತಿಯ ಹಾನಿಗೊಳಗಾಗಿರಲಿಲ್ಲ. ಮೊಬೈಲ್ ಕೂಡ ಯಾವುದೇ ರೀತಿಯ ಹಾನಿಗೊಳಗಾಗಿರಲಿಲ್ಲ. ಈ ಮಾಹಿತಿಯನ್ನು ಸ್ಟೀಫನ್ ಟಿಕ್ ಟಾಕ್ ನಲ್ಲಿ ಹಂಚಿಕೊಂಡಿದ್ದಾನೆ.
ವರ್ತೂರು ಪ್ರಕಾಶ್ ಸೇರಿ 105 ಜನರ ವಿರುದ್ಧ FIR ದಾಖಲು
ಇನ್ನು ಸೆಲ್ ಫೋನ್ ನ ಮಾಲೀಕನಿಗಾಗಿ ಹುಡುಕಾಡಲು ಸೇವಾ ಪೂರೈಕೆದಾರರಿಂದ ಮಾಹಿತಿ ಸಂಗ್ರಹಿಸಲು ಸಾಧ್ಯವಾಯಿತು. ಮೊಬೈಲ್ ನ ವಾರಸುದಾರ ಸಿಕ್ಕ ಕೂಡಲೇ ಸ್ಟೀಫನ್ ಮಾಲೀಕರಿಗೆ ಐಫೋನ್ ಹಸ್ತಾಂತರಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ಬ್ರಿಟೀಷ್ ಕೊಲಂಬಿಯಾದ ಹ್ಯಾರಿಸನ್ ಹಾಟ್ ಸ್ಟ್ರಿಂಗ್ಸ್ ನ ಸರೋವರದ ತಳಭಾಗದಲ್ಲಿ ಮುಳುಗುತಜ್ಞ ಕ್ಲೇಟನ್ ಹೆಲ್ಕೆನ್ ಬರ್ಗ್ ಎಂಬಾತನಿಗೆ ಐಫೋನ್ 11 ಸಿಕ್ಕಿತ್ತು. ಮೊಬೈಲ್ ಜೊತೆಗೆ ಬೇರೆ ವಸ್ತುಗಳು ಕೂಡ ಸಿಕ್ಕಿದ್ದವು. ಕೂಡಲೇ ಈತ ಐಫೋನ್ ಸ್ವಚ್ಛಗೊಳಿಸಿದಾಗ, ಮೊಬೈಲ್ ಕಾರ್ಯನಿರ್ವಹಿಸಿದೆ. ಇದರಿಂದ ಕ್ಲೇಟನ್ ಗೆ ಆಶ್ಚರ್ಯವುಂಟಾಗಿತ್ತು.