ರಿಲಾಯನ್ಸ್ ಜಿಯೋ ಬಳಕೆದಾರರಿಗೆ ವಿಶೇಷ ಫೀಚರ್ ಬಿಡುಗಡೆ ಮಾಡಿದೆ.
ಜಿಯೋ ತನ್ನ ವೆಬ್ ಬ್ರೌಸಿಂಗ್ ಅಪ್ಲಿಕೇಷನ್ ಜಿಯೋ ಪೇಜ್ ನಲ್ಲಿ ಹೊಸ ವೈಶಿಷ್ಟ್ಯವನ್ನು ಸೇರಿಸಿದೆ. ಇದಕ್ಕೆ ಸ್ಟಡಿ ಮೋಡ್ ಎಂದು ಹೆಸರಿಟ್ಟಿದೆ. ಈ ವೈಶಿಷ್ಟ್ಯದ ವಿಶೇಷವೆಂದರೆ ಇದನ್ನು ವಿದ್ಯಾರ್ಥಿಗಳಿಗಾಗಿ ಮಾಡಲಾಗಿದೆ. ಶಾಲೆಗಳಿಲ್ಲದ ಕಾರಣ ಆನ್ಲೈನ್ ಕ್ಲಾಸ್ ನಡೆಯುತ್ತಿದೆ. ಸ್ಟಡಿ ಮೋಡ್, ಮಕ್ಕಳಿಗೆ ನೆರವಾಗಲಿದೆ ಎಂದು ಕಂಪನಿ ಹೇಳಿದೆ.
ಜಿಯೋದ ಹೊಸ ಫೀಚರ್ ಸ್ಟಡಿ ಮೋಡ್, ಬಳಕೆದಾರರಿಗೆ ತರಗತಿವಾರು ವಿಷಯವನ್ನು ಒದಗಿಸುತ್ತದೆ. ಬಳಕೆದಾರರು ತಮ್ಮ ವಿಷಯಕ್ಕೆ ಅನುಗುಣವಾಗಿ ವೀಡಿಯೊ ಚಾನೆಲ್‌ಗಳ ಸಲಹೆಗಳನ್ನು ಪಡೆಯಬಹುದು. ಇದಲ್ಲದೆ ಶಿಕ್ಷಣ ವೆಬ್‌ಸೈಟ್‌ಗಳಿಗೆ ಲಿಂಕ್‌ಗಳನ್ನು ನೀಡಲಾಗಿದೆ. ಬಳಕೆದಾರರು ಗೂಗಲ್ ನಲ್ಲಿ ಹುಡುಕುವ ಬದಲು ನೇರವಾಗಿ ಆ ವೆಬ್‌ಸೈಟ್‌ಗಳನ್ನು ತಲುಪಬಹುದು.
ಜಿಯೋಪೇಜ್ ನಲ್ಲಿ ಸ್ಟಡಿ ಮೋಡ್ ಬಳಸಲು, ಮೊದಲು ವೆಬ್ ಬ್ರೌಸರ್ ಡೌನ್ಲೋಡ್ ಮಾಡಿಕೊಳ್ಳಬೇಕು. ಡೌನ್‌ಲೋಡ್ ಪೂರ್ಣಗೊಂಡ ನಂತರ, ಅಪ್ಲಿಕೇಶನ್ ಓಪನ್ ಮಾಡಬೇಕು. ಅಲ್ಲಿ ಮೋಡ್ ಆಯ್ಕೆ ಮಾಡಬೇಕು. ಸ್ವಿಚ್ ಮೋಡ್ ಗೆ ಹೋಗುವ ಮೂಲಕ ಸ್ಟೆಡಿ ಮೋಡ್ ಸಕ್ರಿಯಗೊಳಿಸಬೇಕು. ಜಿಯೋ ಸೆಟ್-ಟಾಪ್ ಬಾಕ್ಸ್ ನಲ್ಲಿ ಜಿಯೋ ಪೇಜ್ ಲಭ್ಯವಿದೆ. ಇತರ ಆಂಡ್ರಾಯ್ಡ್ ಟಿವಿ ಬಳಕೆದಾರರು, ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು.