ಸಿಬಿಎಸ್ಇ ಬೋರ್ಡ್ 10ನೇ ತರಗತಿ ಫಲಿತಾಂಶ ಪ್ರಕಟಿಸಿದೆ. ಈ ಬಾರಿ ಶೇಕಡಾ 99.04 ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. 57,824 ವಿದ್ಯಾರ್ಥಿಗಳು ಶೇಕಡಾ 95 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. 2,00,962 ವಿದ್ಯಾರ್ಥಿಗಳು ಶೇಕಡಾ 90 ರಿಂದ ಶೇಕಡಾ 95 ರಷ್ಟು ಅಂಕಗಳನ್ನು ಪಡೆದಿದ್ದಾರೆ.
10ನೇ ತರಗತಿ ಫಲಿತಾಂಶವನ್ನು ಸಿಬಿಎಸ್ಇಯ ಅಧಿಕೃತ ವೆಬ್‌ಸೈಟ್ cbse.gov.in ನಲ್ಲಿ ಬಿಡುಗಡೆ ಮಾಡಲಾಗಿದೆ. ವರದಿಗಳ ಪ್ರಕಾರ, ಈ ಬಾರಿ ದೇಶದಾದ್ಯಂತ 20,97,128 18 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದರು. ಅದರಲ್ಲಿ 20,76,997 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದ್ರಲ್ಲಿ ಶೇಕಡಾ 98.89 ವಿದ್ಯಾರ್ಥಿಗಳು ಮತ್ತು ಶೇಕಡಾ 99.29 ವಿದ್ಯಾರ್ಥಿನಿಯರು ಪಾಸ್ ಆಗಿದ್ದಾರೆ.
16,639 ವಿದ್ಯಾರ್ಥಿಗಳ ಫಲಿತಾಂಶಗಳನ್ನು ಬೋರ್ಡ್ ಇನ್ನೂ ಘೋಷಿಸಿಲ್ಲ. ಈ ವಿದ್ಯಾರ್ಥಿಗಳ ಫಲಿತಾಂಶಗಳನ್ನು ತಡೆಹಿಡಿಯಲಾಗಿದೆ. ಮಂಡಳಿಯಿಂದ ಈ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಬಂದಿಲ್ಲ. 17636 ವಿದ್ಯಾರ್ಥಿಗಳನ್ನು ಕಂಪಾರ್ಟ್ಮೆಂಟ್ ವಿಭಾಗದಲ್ಲಿ ಇರಿಸಲಾಗಿದೆ. ಈ ವಿಭಾಗಕ್ಕೆ ಆಗಸ್ಟ್ 16,2021 ರಿಂದ ಸೆಪ್ಟೆಂಬರ್15, 2021 ರವರೆಗೆ ಪರೀಕ್ಷೆ ನಡೆಯಲಿದೆ.
ಪರೀಕ್ಷೆ ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು https://www.cbse.gov.in/ ವೆಬ್ಸೈಟ್ ಗೆ ಹೋಗಿ ಮುಖಪುಟದಲ್ಲಿ ಫಲಿತಾಂಶದ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ತರಗತಿ, ರೋಲ್ ನಂಬರ್ ನಮೂದಿಸಿ ಕ್ಲಿಕ್ ಮಾಡಿದಲ್ಲಿ ಫಲಿತಾಂಶ ಬರಲಿದೆ.