ಕೊರೊನಾದ ಹುಟ್ಟೂರು ಚೀನಾದ ವುಹಾನ್ ನಲ್ಲಿ ಕೊರೊನಾದ ಹೊಸ ಪ್ರಕರಣ ವರದಿಯಾಗಿದೆ. ಸುಮಾರು ಒಂದು ವರ್ಷಗಳ ನಂತ್ರ ವುಹಾನ್ ನಲ್ಲಿ ಮತ್ತೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಕೊರೊನಾ ಸೋಂಕು ಕಾಣಿಸಿಕೊಳ್ತಿದ್ದಂತೆ ವುಹಾನ್ ನಲ್ಲಿ ನೆಲೆಸಿರುವ ಪ್ರತಿಯೊಬ್ಬರಿಗೂ ಕೊರೊನಾ ಪರೀಕ್ಷೆ ನಡೆಸಲು ಅಲ್ಲಿನ ಆಡಳಿತ ನಿರ್ಧರಿಸಿದೆ.
ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ವುಹಾನ್‌ನ ಸ್ಥಳೀಯ ಆಡಳಿತಾಧಿಕಾರಿ ಲಿ ಟಾವೊ, ಎಲ್ಲರಿಗೂ ಕೊರೊನಾ ಪರೀಕ್ಷೆ ಶೀಘ್ರದಲ್ಲೇ ಶುರುವಾಗಲಿದೆ ಎಂದಿದ್ದಾರೆ. ಚೀನಾದ ವುಹಾನ್ ನಗರದ ಜನಸಂಖ್ಯೆ 1 ಕೋಟಿಗೂ ಹೆಚ್ಚಿದೆ.
ಏಳು ವಲಸೆ ಕಾರ್ಮಿಕರಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಕಂಡುಬಂದಿವೆ ಎಂದು ಸೋಮವಾರ ಅಧಿಕಾರಿಗಳು ಹೇಳಿದ್ದರು. 2020 ರ ಆರಂಭಿಕ ತಿಂಗಳಲ್ಲಿ ವುಹಾನ್‌ನಲ್ಲಿ ಕೊರೊನಾ ಸೋಂಕಿನ ನಿಯಂತ್ರಣವಾಗಿದೆ ಎಂದು ಚೀನಾ ಹೇಳಿತ್ತು. ನಂತ್ರ ಒಂದು ವರ್ಷದವರೆಗೆ ಕೊರೊನಾ ಸೋಂಕಿನ ಯಾವುದೇ ಪ್ರಕರಣ ಪತ್ತೆಯಾಗಿರಲಿಲ್ಲ.
ಮಂಗಳವಾರ ಚೀನಾದಲ್ಲಿ 61 ಕೊರೊನಾ ಪ್ರಕರಣ ದಾಖಲಾಗಿದೆ. ಚೀನಾದ ನಾನ್ಜಿಂಗ್‌ನ ವಿಮಾನ ನಿಲ್ದಾಣ ಕ್ಲೀನರ್‌ಗಳಿಗೆ ಸೋಂಕು ತಗುಲಿದೆ. ಕೊರೊನಾದ ಡೆಲ್ಟಾ ರೂಪಾಂತರವು ಅನೇಕ ನಗರಗಳಿಗೆ ಹರಡುತ್ತಿದೆ.