ಪಿಂಚಣಿ ಸಿಗೋದು 60 ವರ್ಷವಾದ್ಮೇಲೆ. ಆದರೆ ಈಗ 60 ವರ್ಷದವರೆಗೆ ಕಾಯುವ ಅವಶ್ಯಕತೆಯಿಲ್ಲ. ಎಲ್‌ಐಸಿ ಇತ್ತೀಚೆಗೆ ಹೊಸ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಲ್ಲಿ ದೊಡ್ಡ ಮೊತ್ತವನ್ನು ಜಮಾ ಮಾಡಿದ್ರೆ, 40 ನೇ ವಯಸ್ಸಿನಲ್ಲಿಯೂ ಪಿಂಚಣಿ ಪಡೆಯಬಹುದು.
ಎಲ್ಐಸಿ ಇದಕ್ಕೆ ಸರಳ ಪಿಂಚಣಿ ಯೋಜನೆ ಎಂದು ಹೆಸರಿಟ್ಟಿದೆ. ಇದು ಒಂದೇ ಪ್ರೀಮಿಯಂ ಪಿಂಚಣಿ ಯೋಜನೆಯಾಗಿದ್ದು, ಇದರಲ್ಲಿ ಪಾಲಿಸಿಯನ್ನು ತೆಗೆದುಕೊಳ್ಳುವ ಸಮಯದಲ್ಲಿ ಮಾತ್ರ ಪ್ರೀಮಿಯಂ ಪಾವತಿಸಬೇಕು. ಇದರ ನಂತರ ಜೀವನದುದ್ದಕ್ಕೂ ಪಿಂಚಣಿ ಪಡೆಯುವುದನ್ನು ಮುಂದುವರಿಸುತ್ತೀರಿ. ಪಾಲಿಸಿದಾರನ ಮರಣದ ನಂತರ ಸಿಂಗಲ್ ಪ್ರೀಮಿಯಂ ಮೊತ್ತವನ್ನು ನಾಮಿನಿಗೆ ಹಿಂತಿರುಗಿಸಲಾಗುತ್ತದೆ. ಸರಳ ಪಿಂಚಣಿ ಯೋಜನೆ ತಕ್ಷಣದ ವರ್ಷಾಶನ ಯೋಜನೆಯಾಗಿದೆ.
ಪಾಲಿಸಿಯನ್ನು ತೆಗೆದುಕೊಂಡ ತಕ್ಷಣ ಪಿಂಚಣಿ ಪಡೆಯಲು ಪ್ರಾರಂಭಿಸುತ್ತೀರಿ. ಈ ಪಿಂಚಣಿ ಯೋಜನೆಯನ್ನು ಎರಡು ರೀತಿಯಲ್ಲಿ ತೆಗೆದುಕೊಳ್ಳಬಹುದು. ಪಾಲಿಸಿಯನ್ನು ಒಬ್ಬ ವ್ಯಕ್ತಿ ಮಾತ್ರ ಪಡೆಯಬಹುದು. ಆತನ ಮರಣದ ನಂತ್ರ ಬೇಸ್ ಪ್ರೀಮಿಯಂ ಮೊತ್ತವನ್ನು ಅವರ ನಾಮಿನಿಗೆ ಹಿಂತಿರುಗಿಸಲಾಗುತ್ತದೆ. ಎರಡನೇ ಮಾರ್ಗದಲ್ಲಿ ಇಬ್ಬರೂ ಸಂಗಾತಿಗಳು ವ್ಯಾಪ್ತಿಯನ್ನು ಹೊಂದಿರುತ್ತಾರೆ. ಪ್ರಾಥಮಿಕ ಪಿಂಚಣಿದಾರರು ಜೀವಂತವಾಗಿರುವವರೆಗೂ, ಅವರು ಪಿಂಚಣಿ ಪಡೆಯುವುದನ್ನು ಮುಂದುವರಿಸುತ್ತಾರೆ. ಅವರ ಮರಣದ ನಂತರ, ಅವರ ಸಂಗಾತಿಯು ಜೀವನಪೂರ್ತಿ ಪಿಂಚಣಿ ಪಡೆಯುವುದನ್ನು ಮುಂದುವರಿಸುತ್ತಾರೆ. ಇಬ್ಬರ ಮರಣದ ನಂತರ ಬೇಸ್ ಪ್ರೀಮಿಯಂ ಮೊತ್ತವನ್ನು ನಾಮಿನಿಗೆ ನೀಡಲಾಗುವುದು.
ಈ ಯೋಜನೆ ಲಾಭ ಪಡೆಯಲು ಕನಿಷ್ಠ 40 ವರ್ಷವಾಗಿರಬೇಕು. ಗರಿಷ್ಠ 80 ವರ್ಷವಾಗಿರಬೇಕು. ಪಿಂಚಣಿ ಪಡೆಯುವ ಆಯ್ಕೆ ಪಿಂಚಣಿದಾರರನ್ನು ಅವಲಂಬಿಸಿರುತ್ತದೆ. 4 ಆಯ್ಕೆಗಳನ್ನು ಪಡೆಯುತ್ತೀರಿ. ಪ್ರತಿ ತಿಂಗಳು, ಪ್ರತಿ ಮೂರು ತಿಂಗಳಿಗೊಮ್ಮೆ, ಪ್ರತಿ 6 ತಿಂಗಳಿಗೊಮ್ಮೆ ಪಿಂಚಣಿ ತೆಗೆದುಕೊಳ್ಳಬಹುದು. ವರ್ಷಕ್ಕೊಮ್ಮೆ ಕೂಡ ಪಡೆಯಬಹುದು.
ಈ ಸರಳ ಪಿಂಚಣಿ ಯೋಜನೆಗೆ ಪಿಂಚಣಿ ಆಯ್ಕೆ ಮೇಲೆ ಹಣ ನೀಡಬೇಕು. ಪ್ರತಿ ತಿಂಗಳು ಪಿಂಚಣಿ ಬಯಸಿದರೆ, ಕನಿಷ್ಟ 1000 ಪಿಂಚಣಿ, ಮೂರು ತಿಂಗಳಿಗೆ 3000 ರೂಪಾಯಿ ಮತ್ತು 6 ತಿಂಗಳುಗಳಿಗೆ 6000 ಮತ್ತು 12 ತಿಂಗಳಿಗೆ 12000 ರೂಪಾಯಿ ಪಿಂಚಣಿ ಪಡೆಯಬೇಕು. ಇದಕ್ಕೆ ಗರಿಷ್ಠ ಮಿತಿ ಇಲ್ಲ.
40 ವರ್ಷ ವಯಸ್ಸಿನವರಾಗಿದ್ದು, 10 ಲಕ್ಷದ ಒಂದು ಪ್ರೀಮಿಯಂ ಠೇವಣಿ ಇಟ್ಟಿದ್ದರೆ, ವಾರ್ಷಿಕ 50250 ರೂಪಾಯಿ ಪಡೆಯುತ್ತೀರಿ. ಠೇವಣಿ ಮೊತ್ತವನ್ನು ಮಧ್ಯದಲ್ಲಿ ಹಿಂತಿರುಗಿಸಲು ಬಯಸಿದರೆ, ಶೇಕಡಾ 5 ರಷ್ಟು ಕಡಿತಗೊಳಿಸಿ ಉಳಿದ ಠೇವಣಿ ನೀಡಲಾಗುತ್ತದೆ.