ನವದೆಹಲಿ: ಕೊರೋನಾ ಸಾಂಕ್ರಾಮಿಕ ರೋಗ ಕಡಿಮೆಯಾಗುತ್ತದೆ. ಲಸಿಕೆ ಬಂದ ನಂತರ ಸೋಂಕು ಇಳಿಮುಖವಾಗುತ್ತಿದೆ ಎಂದುಕೊಂಡವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಅಕ್ಟೋಬರ್ ನಲ್ಲಿ ಕೊರೋನಾ ಮೂರನೇ ಅಲೆ ಉಲ್ಬಣವಾಗಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಎರಡನೇ ಅಲೆ ತೀವ್ರತೆ ಕಡಿಮೆಯಾದ ನಂತರ ಅನೇಕ ರಾಜ್ಯಗಳಲ್ಲಿ ಸೋಂಕು ಏರುಗತಿಯಲ್ಲಿ ಸಾಗುತ್ತಿದೆ. ಈ ತಿಂಗಳಲ್ಲಿ ಮೂರನೇ ಅಲೆ ಏಳಬಹುದಾದ ಸಾಧ್ಯತೆ ಇದ್ದು, ಅಕ್ಟೋಬರ್ ನಲ್ಲಿ ಕೊರೋನಾ ಮೂರನೆಯ ಉಲ್ಬಣವಾಗಲಿದೆ ಎಂದು ತಜ್ಞರು ಹೇಳಿದ್ದಾರೆ.
ಕೊರೋನಾ ಮೂರನೆಯ ಅಲೆ ಉಲ್ಬಣವಾದ ಸಂದರ್ಭದಲ್ಲಿ ಪ್ರತಿದಿನ ಒಂದು ಲಕ್ಷದಿಂದ ಒಂದೂವರೆ ಲಕ್ಷದಷ್ಟು ಪ್ರಕರಣಗಳು ಪತ್ತೆಯಾಗಬಹುದು. ಕೇರಳ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ದಿನೇದಿನೇ ಏರುಗತಿಯಲ್ಲಿ ಸಾಗುತ್ತಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿಯೂ ಸೋಂಕು ಏರುಗತಿಯಲ್ಲಿದೆ. ಆಗಸ್ಟ್ ನಲ್ಲಿ ಮೂರನೆಯ ಅಲೆ ಅಪ್ಪಳಿಸಲಿದ್ದು, ಅಕ್ಟೋಬರ್ ನಲ್ಲಿ ಉಲ್ಬಣವಾಗಲಿದೆ ಎಂದು ಹೈದರಾಬಾದ್ ಐಐಟಿ ಸಂಶೋಧಕ ಎಂ. ವಿದ್ಯಾಸಾಗರ್, ಕಾನ್ಪುರ್ ಐಐಟಿ ಸಂಶೋಧಕ ಮಣೀಂದ್ರ ಅಗರವಾಲ್ ಹೇಳಿದ್ದಾರೆ.