ಸಣ್ಣ ವ್ಯಾಪಾರವನ್ನು ವಿಸ್ತರಿಸಲು ಬಯಸಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ದೇಶದ ದೊಡ್ಡ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಧನ ಸಹಾಯ ಮಾಡಲಿದೆ. ಎಸ್‌ಬಿಐನ ಸಣ್ಣ ವ್ಯಾಪಾರದ ಸಾಲ ಯೋಜನೆಯಲ್ಲಿ 25 ಲಕ್ಷದವರೆಗೆ ಸಾಲವನ್ನು ತೆಗೆದುಕೊಳ್ಳಬಹುದು. ಉತ್ಪಾದನೆ ಅಥವಾ ಸೇವಾ ಚಟುವಟಿಕೆಗೆ ಸಂಬಂಧಿಸಿದ ವ್ಯಾಪಾರಕ್ಕಾಗಿ ಈ ಸಾಲವನ್ನು ತೆಗೆದುಕೊಳ್ಳಬಹುದು.
ಎಸ್‌ಬಿಐ ವೆಬ್‌ಸೈಟ್‌ನ ಪ್ರಕಾರ, ಕನಿಷ್ಠ 10 ಲಕ್ಷ ರೂಪಾಯಿ ಮತ್ತು ಗರಿಷ್ಠ 25 ಲಕ್ಷ ರೂಪಾಯಿವರೆಗೆ ಸಾಲವನ್ನು ತೆಗೆದುಕೊಳ್ಳಬಹುದು. ಇದಕ್ಕೆ ಭದ್ರತೆ ನೀಡಬೇಕಾಗುತ್ತದೆ. ಎಸ್‌ಬಿಐ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಸಾಲಗಳ ಎಲ್ಲಾ ಫ್ಲೋಟಿಂಗ್ ದರಗಳನ್ನು ಬಾಹ್ಯ ಬೆಂಚ್‌ಮಾರ್ಕ್ ಆಧಾರಿತ ಸಾಲ ದರಕ್ಕೆ ಲಿಂಕ್ ಮಾಡಿದೆ. ಸಣ್ಣ ವ್ಯಾಪಾರ ಸಾಲಗಳಿಗೆ, ಬಡ್ಡಿ ದರಗಳು, ಸಾಲದ ಮೊತ್ತವನ್ನು ಆಧರಿಸಿರುತ್ತವೆ. ಬಡ್ಡಿ ದರಗಳು ಶೇಕಡಾ 11.05 ರಿಂದ ಆರಂಭವಾಗುತ್ತವೆ. ಈ ಸಾಲ ಯೋಜನೆಯ ಮರುಪಾವತಿ ಅವಧಿ 60 ತಿಂಗಳುಗಳು ಅಂದರೆ 5 ವರ್ಷಗಳು. ಸಣ್ಣ ವ್ಯಾಪಾರ ಸಾಲಕ್ಕಾಗಿ 7,500 ರೂಪಾಯಿ ಸಂಸ್ಕರಣಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಕನಿಷ್ಠ 5 ವರ್ಷಗಳಿಂದ ವ್ಯಾಪಾರ ನಡೆಸುತ್ತಿರುವ ವ್ಯಾಪಾರಿಗೆ ಈ ಸಾಲ ಸಿಗಲಿದೆ. ಮಾಲೀಕರೊಂದಿಗೆ ಬಾಡಿಗೆ ಒಪ್ಪಂದ ಇರಬೇಕಾಗುತ್ತದೆ. ಕನಿಷ್ಠ ಎರಡು ವರ್ಷಗಳ ಕಾಲ ಕರೆಂಟ್ ಅಕೌಂಟ್ ಹೊಂದಿರಬೇಕು. ಕಳೆದ 12 ತಿಂಗಳುಗಳ ಸರಾಸರಿ ಮಾಸಿಕ ಬ್ಯಾಲೆನ್ಸ್ 1 ಲಕ್ಷ ರೂಪಾಯಿಯಾಗಿರಬೇಕು.