ಬೆಂಗಳೂರು; ಬಿಸಿ ನೀರು ಸೇವನೆಯಿಂದ ಹಲವಾರು ಕಾಯಿಲೆಯಿಂದ ದೂರವಿರಬಹುದು ಎಂಬ ಮಾತಿದೆ. ಅದರಲ್ಲೂ ಕ್ಯಾನ್ಸರ್ ನಂತಹ ಮಾರಣಾಂತಿಕ ರೋಗ ಕೂಡ ಬಿಸಿ ನೀರು ಕುಡಿಯುವುದರಿಂದ ಗುಣವಾಗುತ್ತೆ ಎಂದು ಇತ್ತೀಚೆಗೆ ಹಲವು ಸುದ್ದಿಗಳು ಹರಡುತ್ತಿವೆ. ಬಿಸಿನೀರು ಸೇವನೆ ನಿಜಕ್ಕೂ ಆರೋಗ್ಯಕಾರಿಯೇ ? ಅಥವಾ ಅಪಾಯಕಾರಿಯೇ ? ಬಿಸಿ ನೀರು ಸೇವನೆಯಿಂದ ಏನೆಲ್ಲ ಸಮಸ್ಯೆಗಳು ಎದುರಾಗಬಹುದು ? ಎಂಬ ಬಗ್ಗೆ ಮಹತ್ವದ ಮಾಹಿತಿಯೊಂದನ್ನು ಡಾ. ರಾಜು ಕೃಷ್ಣಮೂರ್ತಿ ತಮ್ಮ ಹೊಸ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.
ಪ್ರತಿ ಭಾರತೀಯನಿಗೂ ಖುಷಿ ಸುದ್ದಿ ತಂದಿದೆ ಆಗಸ್ಟ್ ತಿಂಗಳು: ಮೋದಿ
ಬಿಸಿ ನೀರು ಸೇವನೆಯಿಂದ ಸ್ವಲ್ಪ ಮಟ್ಟಿನಲ್ಲಿ ಗಂಟಲಲ್ಲಿನ ಕಿರಿಕಿರಿ ನಿವಾರಣೆ ಮಾಡುತ್ತೆ ನಿಜ. ಆದರೆ ಯಾವಾಗಲೂ ಅತಿಯಾದ ಬಿಸಿ ನೀರು ಸೇವನೆ ಗಂಟಲು ಹಾಗೂ ಅನ್ನನಾಳವನ್ನು ಡ್ಯಾಮೇಜ್ ಮಾಡುವ ಅಪಾಯವಿದೆ. ಆರೋಗ್ಯಕಾರಿ ಕೆಲ ಜೀವಕೋಶಗಳು ಸಾಯುವ ಅಪಾಯವಿದ್ದು, ಇದರಿಂದ ಇನ್ ಫೆಕ್ಷನ್ ಹೆಚ್ಚಾಗುವ ಸಾಧ್ಯತೆ ಇದೆ.
ಗಂಟಲಲ್ಲಿನ ವೈರಸ್, ಬ್ಯಾಕ್ಟಿರಿಯಾ ಸಾಯಿಸಲು ಬಿಸಿ ನೀರಿನ ಸೇವನೆ ಎಂಬುದು ತಪ್ಪು ಕಲ್ಪನೆ. ಶೀತ-ನೆಗಡಿ, ಜ್ವರದಂತಹ ಸಮಸ್ಯೆಯಿದ್ದಾಗ ನೀರನ್ನು ಚೆನ್ನಾಗಿ ಕುದಿಸಿ, ಉಗುರು ಬೆಚ್ಚಗಿನ ನೀರನ್ನು ಸೇವಿಸುವುದು ಉತ್ತಮ ಎಂದು ಡಾ.ರಾಜು ಹೇಳಿದ್ದಾರೆ. ಬಿಸಿ ನೀರು ಸೇವನೆ ಎಷ್ಟು ಅಪಾಯಕಾರಿ ಎಂಬ ಬಗ್ಗೆ ಡಾ. ರಾಜು ಅವರ ಈ ವಿಡಿಯೋ ನೀವು ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.