ಅನಾಥ ಹಿಂದೂ ಹುಡುಗಿಗೆ ಆಶ್ರಯ ನೀಡಿದ್ದ ಮುಸ್ಲಿಂ ವ್ಯಕ್ತಿಯೊಬ್ಬ ಆಕೆಯನ್ನು ಹಿಂದೂ ಯುವಕನಿಗೆ ಮದುವೆ ಮಾಡಿಕೊಟ್ಟ ವಿಶೇಷವಾದ ಘಟನೆಯು ವಿಜಯಪುರದಲ್ಲಿ ನಡೆದಿದೆ.
18 ವರ್ಷದ ಪೂಜಾ ವಡಿಗೇರಿ ಎಂಬ ಯುವತಿಯನ್ನು ಮೆಹಬೂಬ್ ಮಸ್ಲಿಯೇ ಪೋಷಿಸುತ್ತಿದ್ದರು. ಇದೀಗ ಹಿಂದೂ ಸಂಪ್ರಯದಾದಂತೆ ಈಕೆಯನ್ನು ಹಿಂದೂ ಯುವಕನಿಗೆ ಧಾರೆ ಎರೆದು ಕೊಟ್ಟಿದ್ದಾರೆ.
ದಶಕಗಳ ಹಿಂದೆ ಅನಾಥೆಯಾಗಿದ್ದ ಈ ಯುವತಿಯನ್ನು ದತ್ತು ತೆಗೆದುಕೊಳ್ಳಲು ಆಕೆಯ ಸಂಬಂಧಿಗಳೇ ನಿರಾಕರಿಸಿದ ಹಿನ್ನೆಲೆ ಈ ಮೆಹಬೂಬ್ ಅಲಿ ಪೂಜಾಗೆ ಮಗಳ ಸ್ಥಾನವನ್ನು ನೀಡಿದ್ದಾರೆ. ಮಸ್ಲಿ ನಾಲ್ಕು ಮಕ್ಕಳ ತಂದೆಯಾಗಿದ್ದರೂ ಸಹ ಪೂಜಾಳನ್ನು ಮಗಳಂತೆ ಸಾಕಲು ನಿರ್ಧರಿಸಿದ್ದರು.
ಆಕೆಯನ್ನು ಆಕೆಯ ಧರ್ಮದ ಹುಡುಗನಿಗೆ ಕೊಟ್ಟು ಮದುವೆ ಮಾಡೋದು ನನ್ನ ಕರ್ತವ್ಯವಾಗಿತ್ತು ಎಂದು ಮಸ್ಲಿ ಮಾಧ್ಯಮದವರ ಎದುರು ಹೇಳಿದ್ದಾರೆ.
ಆಕೆ ನಮ್ಮ ಮನೆಯಲ್ಲಿ ದಶಕಗಿಂತಲೂ ಹೆಚ್ಚು ಕಾಲ ವಾಸವಿದ್ದಳು. ಆದರೆ ನಾನೆಂದೂ ಆಕೆಯ ಮೇಲೆ ಇಸ್ಲಾಂ ಧರ್ಮವನ್ನು ಹೇರಿರಲಿಲ್ಲ. ಹೀಗಾಗಿ ನಾನು ಆಕೆಗೆ ಮುಸ್ಲಿಂರನ್ನೇ ಮದುವೆ ಆಗುವಂತೆ ಒತ್ತಡ ಕೂಡ ಹೇರಿರಲಿಲ್ಲ. ಈ ರೀತಿ ಮಾಡಿದರೆ ಅದು ನಮ್ಮ ಧರ್ಮಕ್ಕೆ ನಾನು ಮಾಡಿದ ಮೋಸವಾಗುತ್ತಿತ್ತು ಎಂದು ಹೇಳಿದ್ದಾರೆ.