ಕಾರವಾರ: ಬಿಜೆಪಿ ನಾಯಕರು ತಾವು ಸಾಚಾಗಳೆಂದು ತೋರಿಸಿಕೊಳ್ಳುತ್ತಾರೆ. ಆದರೆ ಅವರು ಸಂಸ್ಕೃತಿ ರಹಿತರು ಎಂಬುದು ಗೊತಾಗುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಕಾರವಾರದಲ್ಲಿ ಮಾತನಡಿದ ಸಿದ್ದರಾಮಯ್ಯ, ಡಿ.ವಿ.ಸದಾನಂದಗೌಡ ಹಾಗೂ ರೇಣುಕಾಚಾರ್ಯ ಸೆಕ್ಸ್ ಸ್ಕಾಂಡಲ್ ನಲ್ಲಿ ಸಿಲುಕಿದ್ದಾರೆ. ಹೀಗಾಗಿ ಅವರಿಬ್ಬರೂ ನ್ಯಾಯಾಲಯದಿಂದ ಸ್ಟೇ ತಂದಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಬಿಜೆಪಿಯದ್ದು ಭ್ರಷ್ಟ ಪಕ್ಷ ಹಾಗೂ ಭ್ರಷ್ಟ ಸರ್ಕಾರ. ಯಡಿಯೂರಪ್ಪನವರನ್ನು ಯಾಕೆ ಕೆಳಗಿಳಿಸಿದ್ದು? ಭ್ರಷ್ಟಾಚಾರ ನಡೆಸಿದ್ದರಿಂದಲೇ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲಾಯಿತು. ಬೊಮ್ಮಾಯಿ ಬಗ್ಗೆ ನಾನು ಟೀಕಿಸಲ್ಲ. ಬೊಮ್ಮಾಯಿ ನೂತನ ಸಿಎಂ ಹಾಗಾಗಿ ಈಗಲೇ ಏನೂ ಹೇಳಲ್ಲ ಎಂದು ಹೇಳಿದರು.