ಅಂಚೆ ಕಚೇರಿಯಲ್ಲಿ ಹೂಡಿಕೆಗೆ ಸಾಕಷ್ಟು ಯೋಜನೆಗಳಿವೆ. ಉಳಿತಾಯ ಖಾತೆಯನ್ನೂ ನೀವು ತೆರೆಯಬಹುದು. ಅಂಚೆ ಕಚೇರಿ ಕೂಡ ಬ್ಯಾಂಕುಗಳಂತೆ ಗ್ರಾಹಕರಿಗೆ ಎಟಿಎಂ ಕಾರ್ಡ್ ನೀಡುತ್ತದೆ. ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯೊಂದಿಗೆ ಎಟಿಎಂ ಅಥವಾ ಡೆಬಿಟ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸಿದ್ದರೆ, ಅದನ್ನು ಬಳಸುವ ಮೊದಲು ವಹಿವಾಟು ಮಿತಿ, ವಹಿವಾಟು ಶುಲ್ಕಗಳು ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳನ್ನು ಅರ್ಥಮಾಡಿಕೊಳ್ಳಬೇಕು.
ಅಂಚೆ ಕಚೇರಿಯ ಅಧಿಕೃತ ವೆಬ್ಸೈಟ್ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಎಟಿಎಂ ಕಾರ್ಡ್ ಮೂಲಕ ದಿನಕ್ಕೆ ಗರಿಷ್ಠ 25,000 ರೂಪಾಯಿ ವಿತ್ ಡ್ರಾ ಮಾಡಬಹುದು. ಒಂದೇ ಬಾರಿ 25 ಸಾವಿರ ರೂಪಾಯಿ ವಿತ್ ಡ್ರಾ ಮಾಡಲು ಸಾಧ್ಯವಿಲ್ಲ. ಒಮ್ಮೆ 10 ಸಾವಿರ ರೂಪಾಯಿ ಮಾತ್ರ ವಿತ್ ಡ್ರಾ ಮಾಡಬಹುದು. ಅಂದ್ರೆ ದಿನಕ್ಕೆ ಮೂರು ಬಾರಿ ವಿತ್ ಡ್ರಾ ಮಾಡುವ ಮೂಲಕ ನೀವು 25 ಸಾವಿರ ರೂಪಾಯಿ ಪಡೆಯಬಹುದು. ಅಂಚೆ ಕಚೇರಿ ಎಟಿಎಂನಿಂದ ಹಣ ವಿತ್ ಡ್ರಾ ಮಾಡಿದ್ರೆ ನೀವು ಯಾವುದೇ ಶುಲ್ಕ ಪಾವತಿ ಮಾಡಬೇಕಾಗಿಲ್ಲ.
BIG NEWS: ರಾಜ್ಯದಲ್ಲಿ ಕೊರೊನಾ 3ನೇ ಅಲೆ ಆರಂಭ; ಕೋವಿಡ್ ನಿಯಂತ್ರಣ ಬಿಟ್ಟು ಸಂಪುಟ ರಚನೆಯತ್ತ ಮುಖ ಮಾಡಿದ ಸಿಎಂ; ಸಿದ್ದರಾಮಯ್ಯ ವಾಗ್ದಾಳಿ
ಬೇರೆ ಬ್ಯಾಂಕಿನ ಎಟಿಎಂನಿಂದ, ಅಂಚೆ ಕಚೇರಿಯ ಎಟಿಎಂ ಕಾರ್ಡ್ ಬಳಸಿ ಹಣ ವಿತ್ ಡ್ರಾ ಮಾಡುವವರಿದ್ದರೆ, ತಿಂಗಳಲ್ಲಿ ಮೂರು ಬಾರಿ ಮೆಟ್ರೋ ನಗರಗಳಲ್ಲಿ ಮತ್ತು 5 ಬಾರಿ ಮೆಟ್ರೋ ಅಲ್ಲದ ನಗರಗಳಲ್ಲಿ ಉಚಿತ ಸೇವೆ ಪಡೆಯಬಹುದು. ಈ ಮಿತಿಗಳ ನಂತರ ಶುಲ್ಕಗಳನ್ನು ವಿಧಿಸಲಾಗುತ್ತದೆ. ಪ್ರತಿ ವಹಿವಾಟಿಗೆ 20 ರೂಪಾಯಿ ಪ್ಲಸ್ ಜಿಎಸ್ಟಿ ಪಾವತಿಸಬೇಕು.