ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್, ಸಿಬಿಎಸ್ಇ 12 ನೇ ತರಗತಿ ಫಲಿತಾಂಶ ಪ್ರಕಟಿಸಿದೆ. 12ನೇ ತರಗತಿ ಫಲಿತಾಂಶದ ಬೆನ್ನಲ್ಲೆ 10 ನೇ ತರಗತಿಯ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಯ್ತಿದ್ದಾರೆ. ಫಲಿತಾಂಶ ಇಂದು ಬಿಡುಗಡೆಯಾಗಲಿದೆ ಎಂಬ ಸುದ್ದಿ ಹರಿದಾಡ್ತಿತ್ತು. ಆದ್ರೆ ಸಿಬಿಎಸ್ಇ ಮಂಡಳಿ ಈ ಬಗ್ಗೆ ಸ್ಪಷ್ಟನೆ ನೀಡಿದೆ.
ಸಿಬಿಎಸ್ಇ ಬೋರ್ಡ್ ವಕ್ತಾರ ರಾಮ ಶರ್ಮಾ, 10 ನೇ ತರಗತಿಯ ಫಲಿತಾಂಶವನ್ನು ಇಂದು ಬಿಡುಗಡೆ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ವಾರ 10 ನೇ ತರಗತಿ ಫಲಿತಾಂಶ ಬಿಡುಗಡೆಯಾಗುವ ಸಾಧ್ಯತೆಯಿದೆ. ಆದ್ರೆ ಮಂಡಳಿ ಯಾವುದೇ ದಿನಾಂಕ ಮತ್ತು ಸಮಯವನ್ನು ಇನ್ನೂ ಘೋಷಿಸಿಲ್ಲ.
12 ನೇ ತರಗತಿಯಂತೆ, 10 ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ನೋಡಲು, ರೋಲ್ ನಂಬರ್ ಆನ್ಲೈನ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ರೋಲ್ ನಂಬರ್ ಡೌನ್ಲೋಡ್ ಮಾಡದಿದ್ದರೆ, ಈಗಲೇ ಡೌನ್ಲೋಡ್ ಮಾಡಿಕೊಳ್ಳಿ.
10 ನೇ ತರಗತಿ ಫಲಿತಾಂಶವನ್ನು ಪರಿಶೀಲಿಸಲು, ಅಧಿಕೃತ ವೆಬ್ಸೈಟ್ cbse.gov.in ಗೆ ಭೇಟಿ ನೀಡಬೇಕು. ಇದಕ್ಕೂ ಮೊದಲು ರೋಲ್ ನಂಬರ್ ಡೌನ್ಲೋಡ್ ಮಾಡಬೇಕು. ಈ ವೆಬ್ಸೈಟ್ ಮುಖಪುಟದಲ್ಲಿ, ರೋಲ್ ನಂಬರ್ ಫೈಂಡರ್ 2021 ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಮುಂದಿನ ಪುಟದಲ್ಲಿರುವ ‘ಮುಂದುವರಿಸು’ ಮೇಲೆ ಕ್ಲಿಕ್ ಮಾಡಿ. ಈಗ ಕ್ಲಾಸ್ 10 ಆಯ್ಕೆ ಮಾಡಿ. ಕೇಳಿದ ಎಲ್ಲಾ ವಿವರಗಳನ್ನು ನಮೂದಿಸಿ. ನಂತ್ರ ಸಿಬಿಎಸ್ಇ 10ನೇ ತರಗತಿ ರೋಲ್ ಸಂಖ್ಯೆಯನ್ನು ತಿಳಿಯಲು ಸರ್ಚ್ ಡೇಟಾ ಮೇಲೆ ಕ್ಲಿಕ್ ಮಾಡಿ.