ಸೂರತ್: ಗುಜರಾತ್ ನ ಸೂರತ್ ನಲ್ಲಿ ಸ್ಪಾ ಹೆಸರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೆಕ್ಸ್ ರಾಕೆಟ್ ಅನ್ನು ಪೊಲೀಸರು ಭೇದಿಸಿದ್ದಾರೆ. ಕಾರ್ಯಾಚರಣೆ ಸಂದರ್ಭದಲ್ಲಿ ವಿವಿಧ ರಾಜ್ಯಗಳಿಂದ ಕಳ್ಳಸಾಗಣೆ ಮಾಡುತ್ತಿದ್ದ 18 ಮಹಿಳೆಯರನ್ನು ಪೊಲೀಸರು ರಕ್ಷಿಸಿದ್ದಾರೆ. ಸೂರತ್ ನಗರ ಪೊಲೀಸರ ಮಾನವ ಕಳ್ಳಸಾಗಣೆ ವಿರೋಧಿ ಘಟಕದ (AHTU) ತಂಡವು ದಾಳಿ ನಡೆಸಿದೆ.
ವರದಿಯ ಪ್ರಕಾರ, ವೆಸು ಪ್ರದೇಶದ ವಿಐಪಿ ರಸ್ತೆಯ ಮಾರ್ವೆಲ್ಲಾ ಕಾಂಪ್ಲೆಕ್ಸ್ ನಲ್ಲಿರುವ ಅಂಬಿ ಸ್ಪಾದಲ್ಲಿ ಲೈಂಗಿಕ ದಂಧೆ ನಡೆಸಲಾಗುತ್ತಿದೆ ಎಂಬ ಸೂಚನೆಯು ಈ ಘಟಕಕ್ಕೆ ಸಿಕ್ಕಿದ್ದು, ಮಾಹಿತಿಯ ಅನ್ವಯ, ಆರೋಪಿಗಳು ಮುಂಚಿತವಾಗಿ ಹಣ ಕೇಳುತ್ತಿದ್ದರು.
ಗ್ರಾಹಕನನ್ನು ಕಳಿಸಿದ ಪೊಲೀಸರು
ದಾಳಿಗೆ ಪ್ಲಾನ್ ರೂಪಿಸಿದ ಪೊಲೀಸ್ ಅಧಿಕಾರಿಗಳು ಗ್ರಾಹಕನೊಬ್ಬನನ್ನು ಸ್ಪಾಗೆ ಕಳುಹಿಸಿದ್ದು, ಆತನಿಗೆ 1,000 ರೂಪಾಯಿಗಳನ್ನು ಮುಂಗಡವಾಗಿ ಪಾವತಿಸುವಂತೆ ಕೇಳಲಾಗಿದೆ. ಕೌಂಟರ್ನಲ್ಲಿದ್ದ ಇಬ್ಬರು ವ್ಯಕ್ತಿಗಳು ಮೊತ್ತವನ್ನು ಪಾವತಿಸುವಂತೆ ಗ್ರಾಹಕನಿಗೆ ತಿಳಿಸಿದ್ದಾರೆ.
18 ಯುವತಿಯರ ರಕ್ಷಣೆ
ನಂತರ ಅಧಿಕಾರಿಗಳು ಸ್ಪಾದಲ್ಲಿ ದಾಳಿ ನಡೆಸಿದ್ದು, ಕೆಲಸ ಮಾಡುತ್ತಿದ್ದ 18 ಮಹಿಳೆಯರನ್ನು ರಕ್ಷಿಸಿದ್ದಾರೆ. ಸ್ಪಾದ ವಿವಿಧ ರೂಂಗಳಲ್ಲಿದ್ದ ಐವರು ಪುರುಷರನ್ನು ಕೂಡ ದಾಳಿ ಸಮಯದಲ್ಲಿ ಬಂಧಿಸಲಾಗಿದೆ. ಸ್ಪಾದ ಮಾಲೀಕ ಕುಲದೀಪ್ ಸಿಂಗ್, ನಿರ್ವಾಹಕ ನಿಲೇಶ್ ಸಿಂಗ್ ಅವರನ್ನೂ ಕೂಡ ಬಂಧಿಸಲಾಗಿದೆ. ಕುಲದೀಪ್ ಮತ್ತು ನೀಲೇಶ್ ಇಬ್ಬರೂ ಸೂರತ್ ನಿವಾಸಿಗಳು.
AHTU ನ ಸಹಾಯಕ ಹೆಡ್ ಕಾನ್ಸ್ ಟೇಬಲ್ ಘನಶ್ಯಾಮ್ ಸಿಂಗ್, ಬಂಧಿತ 18 ಮಹಿಳೆಯರು ತಾವು ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಅಹಮದಾಬಾದ್ ಮತ್ತು ಸೂರತ್ನ ಥಾಣೆ ಮೂಲದವರು ಎಂದು ಹೇಳಿಕೊಂಡಿದ್ದಾರೆ. ಮಾನವ ಕಳ್ಳಸಾಗಣೆ ಸಿಂಡಿಕೇಟ್ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆ(ಐಪಿಸಿ) ಮತ್ತು ಅನೈತಿಕ ಸಂಚಾರ(ತಡೆಗಟ್ಟುವಿಕೆ) ಕಾಯಿದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪೊಲೀಸರು ಕುಲದೀಪ್ ಮತ್ತು ನೀಲೇಶ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.