ಮಡಿಕೇರಿ: ಶಿಶು ಆಭಿವೃದ್ಧಿ ಯೋಜನೆಯ 12 ಅಂಗನವಾಡಿ ಕಾರ್ಯಕರ್ತೆ ಹಾಗೂ 28 ಅಂಗನವಾಡಿ ಸಹಾಯಕಿಯರ ಹುದ್ದೆಯನ್ನು ಭರ್ತಿ ಮಾಡಲು ಅನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಗೌರವಧನ ಆಧಾರದ ಮೇಲೆ ಕಾರ್ಯಕರ್ತೆಯರಿಗೆ 10,000 ರೂ. ಮತ್ತು ಸಹಾಯಕಿಯರಿಗೆ 5,000 ರೂ. ಮಿನಿ ಅಂಗನವಾಡಿ ಕಾರ್ಯಕರ್ತೆ 6,250 ರೂ. ಪಾವತಿಸಲಾಗುವುದು.
ಅರ್ಜಿ ಸಲ್ಲಿಸಲು ಆಗಸ್ಟ್ 31 ರಂದು ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸಲು ಕಾರ್ಯಕರ್ತೆ ಹುದ್ದೆಗೆ 10 ನೇ ತರಗತಿ ತೇರ್ಗಡೆ ಹಾಗೂ ಸಹಾಯಕಿ ಹುದ್ದೆಗೆ 4 ರಿಂದ 9ನೇ ತರಗತಿಯೊಳಗೆ ವ್ಯಾಸಂಗ ಮಾಡಿರಬೇಕು. 18 ರಿಂದ 35 ವರ್ಷ ವಯೋಮಿತಿಯೊಳಗಿರುವ ಹಾಗೂ ಅಂಗನವಾಡಿ ಕೇಂದ್ರಕ್ಕೆ ಒಳಪಟ್ಟ ಗ್ರಾಮ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಹರಾಗಿರುತ್ತಾರೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವೆಬ್‍ಸೈಟ್ www.anganwadirecruit.kar.nic.in ನಲ್ಲಿ ಅರ್ಜಿಯನ್ನು ಭರ್ತಿ ಮಾಡಬೇಕು. ಆನ್‍ಲೈನ್‍ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕಿದ್ದು, ಇತರೇ ಯಾವುದೇ ರೂಪದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ದೂ: 08274-249010 ನ್ನು ಸಂಪರ್ಕಿಸಬಹುದು.
ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ ಮಲ್ಲೂರು, ಭದ್ರಗೋಳ-1, ಅತ್ತೂರು, ಕಾಳಪ್ಪ ಕಾಲೋನಿ, ದೇವಮ್ಮಚ್ಚಿ, ಕಾಕೋಟುಪರಂಬು, ಹಚ್ಚಿನಾಡು, ಅಂಬುಕೋಟೆ, ಕಾಕೂರು, ಬೀರುಗ 1, ಶ್ರೀಮಂಗಲ, ನಲ್ಲೂರು ಖಾಲಿ ಇದೆ.
ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಮಂಚ್ಚಳ್ಳಿ 2, ಬೆಳ್ಳುಮಾಡು 1, ವಿ.ಬಾಡಗ, ಹೊಸನಲ್ಲಿಕೋಟೆ ಕಾಟಿಗುಂಡಿ ಪೈಸಾರಿ, ಆಂಗೋಡು, ತೆರಾಲು 2, ಕುಂದೂರು, ಮಲ್ಲೂರು, ನಿಟ್ಟೂರು, ಕುರ್ಚಿ 2, ಬೇತ್ರಿ, ದೇವನೂರು 2, ಬಿಳುಗುಂದ, ಮೀನುಪೇಟೆ, ಬೇಗುರು, ಅಮ್ಮತ್ತಿ 1, ಬಿ.ಶೆಟ್ಟಿಗೇರಿ, ಟಿ.ಶೆಟ್ಟಿಗೇರಿ 1, ದೇವರಕಾಡು 1, ಚಾಮಿಯಾಲ , ಕುಂದ, ಪೊನ್ನಪ್ಪಸಂತೆ, ಇಂಜಿಲಗೆರೆ, ಗದ್ದೆಮನೆ, ಗುಡ್ಲೂರು, ನಾಲ್ಕೇರಿ 1, ಕರಡಿಗೋಡು 2 ಕೇಂದ್ರಗಳು ಖಾಲಿ ಇದ್ದು, ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪೊನ್ನಂಪೇಟೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅವರು ತಿಳಿಸಿದ್ದಾರೆ