ನವದೆಹಲಿ: ಹಣಕಾಸು ಸಚಿವಾಲಯದಿಂದ ಪ್ರತಿ ತಿಂಗಳು 1.30 ಲಕ್ಷ ರೂಪಾಯಿ ತುರ್ತು ಹಣ ನೀಡಲಾಗುತ್ತದೆ ಎಂಬ ಸಂದೇಶ ನಿಮಗೆ ಬಂದಿದೆಯೇ? ನೀವು ಅಂತಹ ಸಂದೇಶ ಸ್ವೀಕರಿಸಿದ್ದರೆ ಜಾಗರೂಕರಾಗಿರಿ. ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ ಸಂದೇಶ ಹೆಚ್ಚು ವೈರಲ್ ಆಗುತ್ತಿವೆ. ಪಿಐಬಿ ಫ್ಯಾಕ್ಟ್ ಚೆಕ್ ಈ ವಿಡಿಯೋ ಸತ್ಯಾಸತ್ಯತೆ ಬಗ್ಗೆ ತಿಳಿಸಿದೆ.
ಪಿಐಬಿ ಫ್ಯಾಕ್ಟ್ ಚೆಕ್ ಇದನ್ನು ತನಿಖೆ ಮಾಡಿ ಅದು ಸಂಪೂರ್ಣವಾಗಿ ನಕಲಿ ಎಂದು ಘೋಷಿಸಲಾಗಿದೆ. ಇಂತಹ ಯಾವುದೇ ಯೋಜನೆಯನ್ನು ಹಣಕಾಸು ಸಚಿವಾಲಯ ನಡೆಸುತ್ತಿಲ್ಲ ಎಂದು ಪಿಐಬಿ ಹೇಳಿದೆ.
ಪಿಐಬಿ ಟ್ವೀಟ್ ನಲ್ಲಿ ಮಾಹಿತಿ
ಭಾರತದ ಹಣಕಾಸು ಸಚಿವಾಲಯವು ಜನರಿಗೆ ತುರ್ತು ನಗದು ನೀಡುತ್ತಿದೆ ಎಂದು ವಾಟ್ಸಾಪ್ ಸಂದೇಶದಲ್ಲಿ ಹೇಳಿಕೊಳ್ಳಲಾಗಿದೆ. ತುರ್ತು ನಗದು ರೂಪದಲ್ಲಿ ಹಣಕಾಸು ಸಚಿವಾಲಯವು 6 ತಿಂಗಳುಗಳ ಕಾಲ ಜನರಿಗೆ 1.30 ಲಕ್ಷ ರೂ. ನೀಡಲಿದೆ ಎಂದು ಸಂದೇಶದಲ್ಲಿದೆ ಎಂದು ಪಿಐಬಿ ಫ್ಯಾಕ್ಟ್ ಚೆಕ್ ತನ್ನ ಟ್ವೀಟ್ ನಲ್ಲಿ ತಿಳಿಸಿದೆ.
ಪಿಐಬಿ ಜನರಿಗೆ ನೀಡಿದೆ ಈ ಸಲಹೆ
#PIBFactCheck ನಲ್ಲಿ ಸಂದೇಶ ನಕಲಿ ಎಂದು ಕಂಡುಬಂದಿದೆ. ಅಂತಹ ಯಾವುದೇ ಯೋಜನೆ ಅವಲಂಬಿಸುವ ಮೊದಲು ಜನ ಪರಿಶೀಲನೆ ಮಾಡುವಂತೆ ಪಿಐಬಿ ಸಲಹೆ ನೀಡಿದೆ. ಸರ್ಕಾರದಿಂದ ಪ್ರತಿ ಯೋಜನೆಯ ಬಗ್ಗೆ ಮಾಹಿತಿಯನ್ನು ಮೊದಲು ಸಚಿವಾಲಯದಿಂದ ನೀಡಲಾಗುತ್ತದೆ. ಆದ್ದರಿಂದ, ಸಂಬಂಧಿತ ಸಚಿವಾಲಯದ ವೆಬ್‌ಸೈಟ್, ಪಿಐಬಿ ಮತ್ತು ಇತರ ವಿಶ್ವಾಸಾರ್ಹ ವಿಧಾನಗಳನ್ನು ಪರಿಶೀಲಿಸಿದ ನಂತರವೇ ಪ್ರತಿ ಯೋಜನೆಗೆ ಅರ್ಜಿ ಸಲ್ಲಿಸಿ. ನೀವು ಯಾವುದೇ ನಕಲಿ ಸುದ್ದಿಗಳ ಬಲೆಗೆ ಬಿದ್ದರೆ, ಲಾಭದ ಬದಲು ನೀವು ಆರ್ಥಿಕ ನಷ್ಟವನ್ನು ಎದುರಿಸಬೇಕಾಗಬಹುದು ಎಂದೂ ಹೇಳಲಾಗಿದೆ.
ಕೊರೋನಾ ಕಾಲದಲ್ಲಿ ಹೆಚ್ಚುತ್ತಿದೆ ಸುಳ್ಳು ಸುದ್ದಿ
ಕೊರೋನಾ ಅವಧಿಯಲ್ಲಿ ದೇಶದಾದ್ಯಂತ ಇರುವ ಪರಿಸ್ಥಿತಿಯಿಂದಾಗಿ, ಅನೇಕ ನಕಲಿ ಸುದ್ದಿಗಳು ಹೆಚ್ಚು ವೈರಲ್ ಆಗುತ್ತಿವೆ. ಭಾರತ ಸರ್ಕಾರದ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ ಈ ವೈರಲ್ ಸುದ್ದಿಯನ್ನು ನಿರಾಕರಿಸಿದೆ, ಸರ್ಕಾರವು ಅಂತಹ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಕೊರೋನಾ ಅವಧಿಯಲ್ಲಿ ಇಂತಹ ನಕಲಿ ಸುದ್ದಿಗಳ ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರವು ಅನೇಕ ಪ್ರಯತ್ನಗಳನ್ನು ಕೈಗೊಂಡಿದೆ.
ನೀವು ಫ್ಯಾಕ್ಟ್ ಚೆಕ್ ಕೂಡ ಮಾಡಬಹುದು
ನೀವು ಅಂತಹ ಸಂದೇಶವನ್ನು ಸ್ವೀಕರಿಸಿದರೆ, ನೀವು ಅದನ್ನು ಪಿಐಬಿಗೆ ಕಳುಹಿಸಬಹುದು https://factcheck.pib.gov.in/ ಅಥವಾ whatsapp ಸಂಖ್ಯೆ +918799711259 ಅಥವಾ ಇಮೇಲ್: pibfactcheck@gmail.com. ಈ ಮಾಹಿತಿ ಪಿಐಬಿ ವೆಬ್‌ಸೈಟ್ https://pib.gov.in ನಲ್ಲಿ ಲಭ್ಯವಿದೆ.