ಚಿಕ್ಕಮಗಳೂರು; ಮುಖ್ಯಮಂತ್ರಿಯಾಗಬೇಕು ಎಂದು ನಾನು ಗಡ್ಡ ಬಿಟ್ಟಿಲ್ಲ, ಕಾಲೇಜು ದಿನಗಳಿಂದಲೂ ನಾನು ನಿರಂತರವಾಗಿ ಗಡ್ಡ ಬಿಡುತ್ತಿದ್ದೇನೆ. ಇದು ನನ್ನ ಐಡೆಂಟಿಟಿಯ ಒಂದು ಭಾಗ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಮುಂದಿನ ಮಾರ್ಚ್ ತಿಂಗಳಲ್ಲಿ ಗಡ್ಡಧಾರಿಯೋರ್ವರು ಸಿಎಂ ಆಗ್ತಾರೆ ಎಂಬ ವಿಜಯನಗರ ಮೈಲಾರಲಿಂಗ ಭವಿಷ್ಯ ನುಡಿದ ಬಗ್ಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಗಡ್ಡಾಧಾರಿ ಬಗ್ಗೆ ಭವಿಷ್ಯ ನಿಜವಾದರೆ ಇನ್ಮೇಲೆ ಬಹಳ ಜನ ಗಡ್ಡ ಬಿಡಬಹುದು. ಅದರಲ್ಲೂ ಸಿಎಂ ಸ್ಥಾನದ ಆಕಾಂಕ್ಷಿಗಳೆಲ್ಲರೂ ಗಡ್ಡ ಬಿಡಲು ಆರಂಭಿಸಿದರೂ ಅಚ್ಚರಿ ಇಲ್ಲ ಎಂದರು.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಭೇಟಿಯಾದ ಬೊಮ್ಮಾಯಿ; ಜನತಾಪರಿವಾರದ ನೆನಪು ಮೆಲುಕು ಹಾಕಿದ ಸಿಎಂ
ನಾನು ಕಾಲೇಜು ದಿನಗಳಿಂದಲೂ ಗಡ್ಡ ಬಿಡುತ್ತಾ ಬಂದಿದ್ದೇನೆ. ಇದು ನನ್ನ ಐಡೆಂಟಿಟಿ. ಹಣೆಗೆ ಕುಂಕುಮ, ಕಿವಿಗೆ ಮುರಾ ಹಾಗೂ ಗಡ್ಡ ನನ್ನ ಗುರುತಿನ ಸಂಕೇತ ಎಂದು ಹೇಳಿದರು. ಇದೇ ವೇಳೆ ಮುಖ್ಯಮಂತ್ರಿಯಾಗಲು ಯೋಗ ಬರಬೇಕು. ಬಸವರಾಜ್ ಬೊಮ್ಮಾಯಿ ಅವರಿಗೆ ಈಗ ಯೋಗ ಕೂಡಿ ಬಂದಿದೆ ಹಾಗಾಗಿ ಅವರು ಉತ್ತಮ ಕೆಲಸಗಳನ್ನು ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.