ಬೆಂಗಳೂರು: ಆರ್.ಎಸ್.ಎಸ್ ಹಾಗೂ ಬಿಜೆಪಿ ಗೋಹತ್ಯೆ, ಗೋಮಾಂಸ ಸೇವನೆಯನ್ನು ತೀವ್ರವಾಗಿ ವಿರೋಧಿಸುತ್ತಲೇ ಬಂದಿದೆ. ಆದರೆ ಬಿಜೆಪಿ ಸಚಿವರೊಬ್ಬರು ಹೆಚ್ಚು ಹೆಚ್ಚು ಗೋಮಾಂಸ ತಿನ್ನಬೇಕು ಎಂದು ಹೇಳಿಕೆ ನೀಡಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿದೆ.
ಮೆಘಾಲಯದ ನೂತನ ಸಚಿವ ಸ್ಯಾನ್ಬೋರ್ ಶುಲ್ಲೈ ಇಂಥದ್ದೊಂದು ಕರೆ ಕೊಟ್ಟಿದ್ದು ಚರ್ಚೆಗೆ ಗ್ರಾಸವಾಗಿದೆ. ಕಳೆದ ವಾರವಷ್ಟೇ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ ಶುಲ್ಲೈ, ಇದು ಪ್ರಜಾಪ್ರಭುತ್ವ ರಾಷ್ಟ್ರ ಹಾಗಾಗಿ ಪ್ರತಿಯೊಬ್ಬರಿಗೂ ಅವರವರ ಆಹಾರ ಆಯ್ಕೆ ಸ್ವಾತಂತ್ರ್ಯವಿದ್ದು, ನಾನಂತೂ ಜನರಿಗೆ ಚಿಕನ್, ಮಟನ್, ಫಿಷ್ ಗಿಂತ ಹೆಚ್ಚು ಗೋಮಾಂಸ ತಿನ್ನಿ ಎಂದು ಪ್ರೋತ್ಸಾಹಿಸುತ್ತೇನೆ ಎಂದು ಹೇಳಿದ್ದಾರೆ.
ಅಲ್ಲದೇ ಅಸ್ಸಾಂ ನಲ್ಲಿ ಗೋಹತ್ಯೆ ನಿಷೇಧಕ್ಕೆ ಸಂಬಂಧಿಸಿದಂತೆ ಹೊಸ ಕಾನೂನು ಜಾರಿಯಲ್ಲಿದ್ದು, ಕಾಯ್ದೆಯಿಂದ ಮೆಘಾಲಯಕ್ಕೆ ಜಾನುವಾರು ಸಾಗಣೆಗೆ ಯಾವುದೇ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕು ಎಂದು ಸಿಎಂ ಹಿಮವಂತ ಬಿಸ್ವ ಶರ್ಮಾಗೆ ಮನವಿ ಮಾಡುತ್ತೇನೆ ಎಂದಿದ್ದಾರೆ. ಇದೀಗ ಬಿಜೆಪಿ ಸಚಿವರ ಈ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.