ಬೆಂಗಳೂರು: ಕಾಗ್ನಿಜೆಂಟ್ ಐಟಿ ಕಂಪನಿ 30,000 ಹೊಸಬರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಏಪ್ರಿಲ್ – ಜೂನ್ ತ್ರೈಮಾಸಿಕದಲ್ಲಿ ಶೇಕಡ 31 ರಷ್ಟು ಉದ್ಯೋಗಿಗಳ ವಲಸೆಯನ್ನು ಕಾಗ್ನಿಜೆಂಟ್ ಎದುರಿಸಿತ್ತು. ಈ ಹಿನ್ನೆಲೆಯಲ್ಲಿ 30,000 ಹೊಸಬರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.
ಇಂಜಿನಿಯರಿಂಗ್ ಮತ್ತು ಡಿಜಿಟಲ್ ಕೌಶಲ್ಯ ಹೊಂದಿದವರಿಗೆ ಬೇಡಿಕೆ ಸೃಷ್ಟಿಯಾಗಿದ್ದು, ಬೇಡಿಕೆ ಮತ್ತು ಪೂರೈಕೆಯ ನಡುವೆ ವ್ಯತ್ಯಾಸ ಉಂಟಾಗಿದೆ. ಬಹುತೇಕ ಐಟಿ ಕಂಪನಿಗಳಲ್ಲಿ ಉದ್ಯೋಗಿಗಳ ವಲಸೆ ಹೆಚ್ಚಾಗಿದೆ. ಅಂತೆಯೇ ಕಾಗ್ನಿಜೆಂಟ್ ನಲ್ಲಿ ಕೂಡ ಉದ್ಯೋಗಿಗಳ ತೀವ್ರ ಕೊರತೆ ಎದುರಿಸಿದೆ. ಹೀಗಾಗಿ 30 ಸಾವಿರ ಹೊಸ ಉದ್ಯೋಗಿಗಳ ನೇಮಕಕ್ಕೆ ಕಂಪನಿ ನಿರ್ಧರಿಸಿದೆ.