alex Certify ಚಿಕ್ಕಪ್ಪನ ಕೈಲಿತ್ತು ಮಲತಾಯಿ ಹೆಸರಿನ ಟ್ಯಾಟೂ: ಇದನ್ನು ನೋಡಿದ ಪುತ್ರ ಮಾಡಿದ್ದೇನು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿಕ್ಕಪ್ಪನ ಕೈಲಿತ್ತು ಮಲತಾಯಿ ಹೆಸರಿನ ಟ್ಯಾಟೂ: ಇದನ್ನು ನೋಡಿದ ಪುತ್ರ ಮಾಡಿದ್ದೇನು ಗೊತ್ತಾ….?

ತನ್ನ ಚಿಕ್ಕಪ್ಪನ​ ಕೈಯಲ್ಲಿ ಮಲತಾಯಿಯ ಹೆಸರಿನ ಟ್ಯಾಟೂ ಇರೋದನ್ನ ಗಮನಿಸಿದ ಜೈಪುರದ 20 ವರ್ಷದ ಯುವಕ ಚಿಕ್ಕಪ್ಪನನ್ನೇ ಕೊಲೆ ಮಾಡಿದ್ದಾನೆ.
ಮೃತ ವ್ಯಕ್ತಿಯನ್ನು 44 ವರ್ಷದ ಶಶಿ ಕುಮಾರ್ ಅಗರ್​ವಾಲ್​ ಎಂದು ಗುರುತಿಸಲಾಗಿದೆ. ಕೆಲ ದಿನಗಳ ಹಿಂದಷ್ಟೇ ಶಶಿಕುಮಾರ್​ ಪೋರ್ಟ್​ಬ್ಲೇರ್​ನಿಂದ ಆಗಮಿಸಿದ್ದರು. ಮಂಗಳವಾರ ರಾತ್ರಿ ತನ್ನ ಸೋದರಳಿಯ ರಾಜ್​ನನ್ನು ಭೇಟಿ ಮಾಡಿದ್ದರು. ಈ ಭೇಟಿ ವೇಳೆ ರಾಜ್​ ಶಶಿ ಕೈಯಲ್ಲಿ ತನ್ನ ಮಲತಾಯಿಯ ಹೆಸರು ಟ್ಯಾಟೂ ಆಗಿರೋದನ್ನ ನೋಡಿದ್ದಾನೆ. ಇದೇ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ಶುರುವಾಗಿದೆ.

ವಾಗ್ವಾದದ ಮಧ್ಯದಲ್ಲಿ ರಾಜ್​​ ತನ್ನ ಚಿಕ್ಕಪ್ಪನ ಮೇಲೆ ಭಾರವಾದ ವಸ್ತುವಿನಿಂದ ಹಲ್ಲೆ ಮಾಡಿದ್ದಾನೆ. ಇದಾದ ಬಳಿ ಕೇಬಲ್​ನ ಸಹಾಯದಿಂದ ಶಶಿಯ ಕೊಲೆಗೈದಿದ್ದಾನೆ. ಇದಾದ ಬಳಿಕ ಸ್ನೇಹಿತರ ಸಹಾಯದಿಂದ ಶಶಿಯ ಮೃತದೇಹವನ್ನು ಪ್ಲಾಸ್ಟಿಕ್​ ಬ್ಯಾಗ್​ನಲ್ಲಿ ತುಂಬಿಸಿದ್ದಾರೆ . ಇದಾದ ಬಳಿಕ ಖಾಸಗಿ ಕ್ಯಾಬ್​ ಬುಕ್​ ಮಾಡಿ ಶವದ ಸಮೇತ ಪ್ರಯಾಣ ಬೆಳೆಸಿದ್ದಾರೆ. ಇವರು ನೈವಾಲಾದ ಕಾಡಿನಲ್ಲಿ ಶವವನ್ನು ಸಾಗಿಸಲು ಪ್ಲಾನ್​ ಮಾಡಿದ್ದರು.

ನೈವಾಲಾದಲ್ಲಿ ಶಶಿಯ ಶವವನ್ನು ಹೂಳಲು ಸಾಧ್ಯವಾಗುವಷ್ಟು ದೊಡ್ಡ ಗಾತ್ರದ ಹೊಂಡವನ್ನು ಹೂಳಿದ್ದರು. ಆದರೆ ಅಲ್ಲೇ ಇದ್ದ ಕುರುಬರು ಯುವಕರು ಅನುಮಾನಾಸ್ಪದವಾಗಿ ಏನೋ ಮಾಡುತ್ತಿದ್ದಾರೆ ಎಂದು ಶಂಕಿಸಿದ್ದಾರೆ. ಕೂಡಲೇ ಗ್ರಾಮಸ್ಥರನ್ನು ಸ್ಥಳಕ್ಕೆ ಸೇರಿಸಿದ್ದಾರೆ. ಈ ವೇಳೆ ಗ್ರಾಮಸ್ಥರು ರಾಜ್​ ಹಾಗೂ ಆತನ ಸ್ನೇಹಿತರನ್ನು ಹಿಡಿದಿದ್ದಾರೆ. ಹಾಗೂ ಪೊಲೀಸರಿಗೆ  ಒಪ್ಪಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...