ಮಕ್ಕಳು ಬಳಸಿ ಬಿಟ್ಟ ನಾನ್-ಬಯೋಡೀಗ್ರೇಡಬಲ್ ಡೈಪರ್ಗಳನ್ನು ಸ್ಟಿಕಿ ನೋಟ್ ಅಂಟು, ಬ್ಯಾಂಡೇಜ್ಗಳಾಗಿ ತಯಾರಿಸಲು ಇರುವ ಅವಕಾಶದ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದಾರೆ.
ಡೈಪರ್ ಬಳಕೆ ನಂತರ ಕಂಡಕಂಡಲ್ಲಿ ಎಸೆಯುವುದು ಕಂಡುಬರುತ್ತದೆ, ಇದು ಪರಿಸರ ಮಾಲಿನ್ಯಕ್ಕೂ ಕಾರಣವಾಗುತ್ತಿದೆ. ಇಂತಹ ಸಮಸ್ಯೆ ಇರುವಾಗ ವಿಜ್ಞಾನಿಗಳು ಹೊಸ ದಿಕ್ಕು ತೋರಿದ್ದಾರೆ.
ಡೈಪರ್ಗಳಲ್ಲಿ ಪಾಲಿಯಾಕ್ರಿಲಿಕ್ ಆಮ್ಲ ಬಳಸುತ್ತಾರೆ. ಈ ನಾನ್ ಡೀಬಯೋಗ್ರೇಡಬಲ್ (ಜೈವಿಕ ವಿಘಟನೀಯವಲ್ಲದ) ವಸ್ತುಗಳನ್ನು ಸೇರಿಸುವುದರಿಂದ ಉಂಟಾಗುವ ಮಾಲಿನ್ಯದ ಸಮಸ್ಯೆಯನ್ನು ನಿಭಾಯಿಸಲು ಮಿಚಿಗನ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ಗುಂಪು ಸಂಶೋಧನೆ ಮಾಡಿದೆ.
ಟೋಕಿಯೊ ಒಲಂಪಿಕ್ಸ್: ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಭಾರತ ಮಹಿಳಾ ಹಾಕಿ ತಂಡ
ಹೀರಿಕೊಳ್ಳುವ ಪಾಲಿಮರ್ಗಳನ್ನು ಗೂಯಿಗೆ(ಅಂಟುಅಂಟಾದ) ಹೋಲುವ ವಸ್ತುಗಳಾಗಿ ಮರುಬಳಕೆ ಮಾಡುವ ಅಂಟಿಸುವ ಟಿಪ್ಪಣಿಗಳು (ಸ್ಟಿಕ್ಕಿ ನೋಟ್) ಮತ್ತು ಬ್ಯಾಂಡೇಜ್ ಮಾಡಬಹುದೆಂದು ಸಂಶೋಧಿಸಿದ್ದಾರೆ.
ನೇಚರ್ ಕಮ್ಯುನಿಕೇಷನ್ಸ್ ನಲ್ಲಿ ಈ ಅಧ್ಯಯನ ವರದಿ ಬಗ್ಗೆ ಪ್ರಕಟವಾಗಿದೆ.
ವಿಜ್ಞಾನಿಗಳು ಅಮೇರಿಕನ್ ಕನ್ಸ್ಯೂಮರ್ ಗೂಡ್ಸ್ ಕಾರ್ಪೊರೇಷನ್, ಪ್ರಾಕ್ಟರ್ ಮತ್ತು ಗ್ಯಾಂಬಲ್ನೊಂದಿಗೆ ಒಟ್ಟಾಗಿ ಕೆಲಸ ಮಾಡಿ ಮೂರು-ಹಂತದ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸಿದರು. ಅದು ಸೂಪರ್ಅಬ್ಸರ್ಬೆಂಟ್ ಪಾಲಿಮರ್ಗಳನ್ನು ಮರುಬಳಕೆ ಮಾಡಬಹುದಾದ ಅಂಟುಗಳಾಗಿ ಪರಿವರ್ತಿಸುತ್ತದೆ.