ಅಂಚೆ ಕಚೇರಿಯಲ್ಲಿ ಖಾತೆ ಹೊಂದಿರುವವರಿಗೊಂದು ಮಹತ್ವದ ಸುದ್ದಿಯಿದೆ. ಅಂಚೆ ಕಚೇರಿಯಲ್ಲಿ ಖಾತೆ ಹೊಂದಿರುವವರು ಈ ಸುದ್ದಿಯನ್ನು ಅವಶ್ಯಕವಾಗಿ ತಿಳಿದಿರಬೇಕು. ಆಗಸ್ಟ್ ಒಂದರಿಂದ ಡೋರ್ಸ್ಟೆಪ್ ಬ್ಯಾಂಕಿಂಗ್ ಸೌಲಭ್ಯಕ್ಕೆ ಶುಲ್ಕ ಪಾವತಿಸಬೇಕು.
ಅಂಚೆ ಕಚೇರಿ ಈಗಾಗಲೇ ಗ್ರಾಹಕರಿಗೆ ಶಾಕಿಂಗ್ ಸುದ್ದಿ ನೀಡಿದೆ. ಜುಲೈ 1 ರಿಂದ ಬಡ್ಡಿ ದರಗಳನ್ನು ಕಡಿತಗೊಳಿಸಿದೆ. ನಾಳೆಯಿಂದ ಡೋರ್ ಸ್ಟೆಪ್ ಬ್ಯಾಂಕಿಂಗ್ ಸೌಲಭ್ಯಕ್ಕೆ ಹಣ ಪಾವತಿಸಬೇಕಾಗಿದೆ. ಇದ್ರಿಂದ ವೆಚ್ಚಗಳ ಹೆಚ್ಚಳದೊಂದಿಗೆ ಲಾಭವೂ ಕಡಿಮೆಯಾಗಲಿದೆ.
ಆಗಸ್ಟ್ 1, 2021 ರಿಂದ, ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್, ಪ್ರತಿ ಗ್ರಾಹಕನಿಗೆ ಡೋರ್ ಸ್ಟೆಪ್ ಬ್ಯಾಂಕಿಂಗ್ ಶುಲ್ಕವಾಗಿ 20 ರೂಪಾಯಿ ವಸೂಲಿ ಮಾಡಲಿದೆ. ಪ್ರಸ್ತುತ ಡೋರ್ ಸ್ಟೆಪ್ ಬ್ಯಾಂಕಿಂಗ್ ಮೇಲೆ ಯಾವುದೇ ಶುಲ್ಕವಿಲ್ಲ. ಈ ಶುಲ್ಕ ವಸೂಲಿ ಗ್ರಾಹಕರ ಜೇಬಿಗೆ ಕತ್ತರಿ ಹಾಕಲಿದೆ.
ಜುಲೈ 1 ರಿಂದ ಉಳಿತಾಯ ಖಾತೆ ಹೊಂದಿರುವ ಗ್ರಾಹಕರಿಗೆ ಕಡಿಮೆ ಬಡ್ಡಿ ಸಿಗ್ತಿದೆ. ಈ ಮೊದಲು, ಗ್ರಾಹಕರು 1 ಲಕ್ಷದವರೆಗಿನ ಉಳಿತಾಯಕ್ಕೆ ಶೇಕಡಾ 2.75ರಷ್ಟು ಬಡ್ಡಿಯನ್ನು ಪಡೆಯುತ್ತಿದ್ದರು. ಈಗ ಶೇಕಡಾ 2.50ರಷ್ಟು ಬಡ್ಡಿ ಸಿಗ್ತಿದೆ.