ಟೋಕಿಯೋ ಒಲಿಂಪಿಕ್ಸ್ ಡಿಸ್ಕಸ್ ಥ್ರೋನಲ್ಲಿ ಭಾರತದ ಕಮಲ್ ಪ್ರೀತ್ ಕೌರ್ ಅದ್ಭುತ ಪ್ರದರ್ಶನದೊಂದಿಗೆ ಫೈನಲ್ ಪ್ರವೇಶಿಸಿದ್ದಾರೆ.
ಡಿಸ್ಕಸ್ ಥ್ರೋನ ಕ್ವಾಲಿಫಿಕೇಶನ್ ರೌಂಡ್ ನಲ್ಲಿ ಕಮಲ್ ಪ್ರೀತ್ ಕೌರ್ ಇತಿಹಾಸ ಬರೆದಿದ್ದಾರೆ. ಅವರು ಮೂರನೇ ಪ್ರಯತ್ನದಲ್ಲಿ 64 ಮೀಟರ್ ಥ್ರೋ ಮಾಡಿದ್ದಾರೆ. ಕಮಲ್ ಪ್ರೀತ್ ಕೌರ್ 64 ಮೀಟರ್ ಎಸೆತದೊಂದಿಗೆ ಮಹಿಳಾ ಡಿಸ್ಕಸ್ ಥ್ರೋ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. ಆಗಸ್ಟ್ 2 ರಂದು ಫೈನಲ್ ನಲ್ಲಿ ಆಡಲಿರುವ ಕಮಲ್ ಪ್ರೀತ್ ಕೌರ್ ಪದಕ ಗೆಲ್ಲುವ ಸಾಧ್ಯತೆ ಇದೆ.