alex Certify ಈ ಕಾರಣಕ್ಕೆ ಟ್ರಕ್​ ಚಾಲಕರನ್ನು ಹುಡುಕುತ್ತಿದ್ದಾರೆ ಒಲಿಂಪಿಕ್​ ಪದಕ ವಿಜೇತೆ ಮೀರಾಬಾಯಿ ಚಾನು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ಟ್ರಕ್​ ಚಾಲಕರನ್ನು ಹುಡುಕುತ್ತಿದ್ದಾರೆ ಒಲಿಂಪಿಕ್​ ಪದಕ ವಿಜೇತೆ ಮೀರಾಬಾಯಿ ಚಾನು..!

ಟೋಕಿಯೋ ಒಲಿಂಪಿಕ್​​ನಲ್ಲಿ ಭಾರ ಎತ್ತುವ ಸ್ಪರ್ಧೆಯಲ್ಲಿ ರಜತ ಪದಕ ಗಳಿಸಿರುವ ಸಾಯಿಕೋಮ್​ ಮೀರಾಬಾಯಿ ಚಾನು ಜನಮನ್ನಣೆಗೆ ಪಾತ್ರರಾಗಿದ್ದಾರೆ. ಸಂಪೂರ್ಣ ಭಾರತವೇ ಹೆಮ್ಮೆ ಪಡುವಂತೆ ಮಾಡಿದ ಈ ಮಹಿಳಾ ಕ್ರೀಡಾಪಟು ಪ್ರಶಸ್ತಿ ಗಳಿಸುವ ಸಲುವಾಗಿ ಸವೆಸಿದ ಹಾದಿ ಮಾತ್ರ ತುಂಬಾನೇ ಕಠಿಣವಾಗಿತ್ತು.

ಯಶಸ್ಸು ಸಿಕ್ಕ ಬಳಿಕ ತಾವು ಸಾಗಿ ಬಂದ ಹಾದಿಯನ್ನ ಮಾತ್ರ ಸಾಯಿಕೋಮ್​ ಮೀರಾಬಾಯಿ ಚಾನು ಮರೆತಂತೆ ಕಾಣುತ್ತಿಲ್ಲ. ಒಲಿಂಪಿಕ್​ನಲ್ಲಿ ಬೆಳ್ಳಿ ಪದಕ ಸಂಪಾದಿಸುವ ಮುನ್ನ ಇಂಫಾಲ್​ನಲ್ಲಿರುವ ತರಬೇತಿ ಕೇಂದ್ರಕ್ಕೆ ತೆರಳಲು ಮೀರಾಬಾಯಿ ಟ್ರಕ್​ ಚಾಲಕರ ನೆರವನ್ನು ಪಡೆಯುತ್ತಿದ್ದರಂತೆ. ಅನೇಕ ಟ್ರಕ್​ ಚಾಲಕರು ಮೀರಾಬಾಯಿಯನ್ನು ಉಚಿತವಾಗಿ ಹಾಗೂ ಸುರಕ್ಷಿತವಾಗಿ ತರಬೇತಿ ಕೇಂದ್ರಕ್ಕೆ ತಲುಪಿಸುತ್ತಿದ್ದರಂತೆ.

ಆದರೆ ಪದಕ ಸಂಪಾದನೆ ಮಾಡಿದ ಬಳಿಕ ಟ್ರಕ್​ ಚಾಲಕರ ಸಹಾಯವನ್ನು ಮರೆಯದ ಮೀರಾಬಾಯಿ ಇವರೆನ್ನೆಲ್ಲ ಭೇಟಿ ಮಾಡಬೇಕೆಂದು ಕಾತುರರಾಗಿದ್ದಾರೆ. ನೊಂಗ್​ಪೋಕ್​ ಕಕ್ಚಿಂಗ್​ ಗ್ರಾಮದಲ್ಲಿ ಖುಮನ್​ ಲಾಂಪಕ್​​​ ಸ್ಪೋರ್ಟ್ಸ್​ ಕಾಂಪ್ಲೆಕ್ಸ್​ಗೆ ಉಚಿತವಾಗಿ ಟ್ರಕ್​ನಲ್ಲಿ ಕರೆದುಕೊಂಡು ಹೋಗುತ್ತಿದ್ದ ಟ್ರಕ್​ ಚಾಲಕರ ಭೇಟಿಗೆ ಕಾಯುತ್ತಿರೋದಾಗಿ ಮೀರಾಬಾಯಿ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...