ಗೋವಾ ಬೀಚ್ನಲ್ಲಿ ಅಪ್ರಾಪ್ತರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ವಿವಾದಾತ್ಮಕ ಹೇಳಿಕೆ ನೀಡಿ ಸಿಎಂ ಪ್ರಮೋದ್ ಸಾವಂತ್ ವಿವಾದಕ್ಕೀಡಾಗಿದ್ದರು. ರಾತ್ರಿ ಏಕೆ ಹೋಗಬೇಕಿತ್ತು ಎಂದು ಹೇಳಿದ ಪ್ರಮೋದ್ ಸಾವಂತ್ ಹೇಳಿಕೆ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ತಮ್ಮ ಹೇಳಿಕೆ ಹಿಂಪಡೆದಿದ್ದ ಸಾವಂತ್ ಅಪ್ರಾಪ್ತರ ಸುರಕ್ಷತೆ ಜವಾಬ್ದಾರಿ ಎಲ್ಲರಿಗೂ ಸೇರಿದ್ದು ಎಂದು ಹೇಳಿದ್ರು.
ಪ್ರಕರಣ ಸಂಬಂಧ ಗೋವಾ ಸರ್ಕಾರದ ಪ್ರತಿಪಕ್ಷಗಳು ಆರೋಪ ಮಾಡಿದ ಒಂದು ದಿನದ ಬಳಿಕ ವಿಪಕ್ಷಗಳ ಟೀಕೆಗೆ ಕಲೆ ಹಾಗೂ ಸಂಸ್ಕೃತಿ ಸಚಿವ ಗೋವಿಂದ ಗವಡೆ ಪ್ರತಿಕ್ರಿಯೆ ನೀಡಿದ್ದಾರೆ. ಹುಡುಗಿಯರ ರಕ್ಷಣೆ ಮಾಡುವ ಸಲುವಾಗಿ ಗೋವಾ ಸರ್ಕಾರಕ್ಕೆ ಪ್ರತಿಯೊಬ್ಬ ಹೆಣ್ಣಿಗೂ ಒಂದೊಂದು ಕಾನ್ಸ್ಟೇಬಲ್ ನೇಮಕ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಅಪ್ರಾಪ್ತ ಹೆಣ್ಣು ಮಕ್ಕಳ ರಕ್ಷಣೆ ಸರ್ಕಾರ ಹಾಗೂ ಪೋಷಕರ ಜಂಟಿ ಜವಾಬ್ದಾರಿಯಾಗಿದೆ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದ್ರು,
ಅಪ್ರಾಪ್ತೆಯರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಿಂದ ಸರ್ಕಾರವು ನುಣುಚಿಕೊಳ್ಳಲು ಯತ್ನಿಸುತ್ತಿದೆ ಎಂದು ಭಾವಿಸಬೇಡಿ. ಮಕ್ಕಳು ಎಲ್ಲಿಗೆ ಹೋಗುತ್ತಿದ್ದಾರೆ ಎಂದು ತಿಳಿದುಕೊಳ್ಳುವುದು ಪೋಷಕರ ಜವಾಬ್ದಾರಿಯಾಗಿದೆ. ಅಲ್ಲದೇ ಅವರು ಬೇರೆ ಸ್ಥಳದಲ್ಲಿ ಉಳಿದುಕೊಳ್ಳಲು ಪೋಷಕರ ಅನುಮತಿ ಪಡೆಯುತ್ತಿದ್ದಾರಾ ಅನ್ನೋದನ್ನೂ ಪೋಷಕರು ಖಾತರಿಪಡಿಸಿಕೊಳ್ಳಬೇಕು ಎಂದು ಗವಡೆ ಹೇಳಿದ್ರು.
ಈ ರೀತಿ ಘಟನೆ ನಡೆದಾಗ ಹೆಚ್ಚು ನೋವನ್ನ ಅನುಭವಿಸುವವರು ಯಾರು..? ಪೋಷಕರೇ ತಾನೆ. ಪ್ರತಿ ಹೆಣ್ಣುಮಕ್ಕಳನ್ನ ಕಾಯಲು ಒಂದೊಂದು ಪೊಲೀಸ್ ಕಾನ್ಸ್ಟೇಬಲ್ ನೇಮಕ ಮಾಡೋದಂತೂ ಆಗಿ ಹೋಗುವ ಕೆಲಸವಲ್ಲ ಎಂದು ಹೇಳಿದ್ರು.