ಕೊರೊನಾ ಮೂರನೇ ಅಲೆಯು ಕರಾವಳಿ ರಾಜ್ಯಕ್ಕೆ ಅಪ್ಪಳಿಸಿದ ಸಂದರ್ಭದಲ್ಲಿ ಗೋವಾದಲ್ಲಿ ಲಸಿಕೆ ಪಡೆಯದ ಜನತೆಯ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಅಭಿಪ್ರಾಯಪಟ್ಟಿದ್ದಾರೆ.
ಮೂರನೇ ಅಲೆಯಲ್ಲಿ ಕೊರೊನಾ ಲಸಿಕೆಯನ್ನು ಪಡೆಯದ ಜನತೆ ಹೆಚ್ಚಾಗಿ ತುತ್ತಾಗುವ ಸಂಭವವಿದೆ. ರೋಗಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ರೂಪಾಂತರದ ಮೇಲೆ ಅವಲಂಭಿಸಿರುತ್ತದೆ ಎಂದು ಗೋವಾ ವಿಧಾನಸಭೆಗೆ ವಿಶ್ವಜಿತ್ ರಾಣೆ ಲಿಖಿತ ರೂಪದಲ್ಲಿ ತಿಳಿಸಿದ್ದಾರೆ.
ಅಲ್ಲದೇ ಕೊರೊನಾ ಮೂರನೇ ಅಲೆಯು ಇದೇ ಸಮಯಕ್ಕೆ ಬರಲಿದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದು ರಾಣೆ ವಿಧಾನಸಭೆಗೆ ತಿಳಿಸಿದ್ದಾರೆ.
ಕೊರೊನಾ ವೈರಸ್ ಶುರುವಾದಾಗಿನಿಂದ ಇಲ್ಲಿಯವರೆಗೆ ಗೋವಾದಲ್ಲಿ ಒಟ್ಟು 1.71 ಲಕ್ಷ ಪ್ರಕರಣಗಳು ವರದಿಯಾಗಿದೆ ಹಾಗೂ 3,144 ಮಂದಿ ಸಾವನ್ನಪ್ಪಿದ್ದಾರೆ.