alex Certify ಈ ವಿಭಾಗದ ಗ್ರಾಹಕರಿಗೆ 5 ರಿಂದ 25 ಲಕ್ಷ ರೂ. ಆರ್ಥಿಕ ಬೆಂಬಲ ನೀಡುತ್ತಿದೆ ಪಂಜಾಬ್​ ನ್ಯಾಷನಲ್​ ಬ್ಯಾಂಕ್​….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವಿಭಾಗದ ಗ್ರಾಹಕರಿಗೆ 5 ರಿಂದ 25 ಲಕ್ಷ ರೂ. ಆರ್ಥಿಕ ಬೆಂಬಲ ನೀಡುತ್ತಿದೆ ಪಂಜಾಬ್​ ನ್ಯಾಷನಲ್​ ಬ್ಯಾಂಕ್​….!

ಪ್ರತಿಷ್ಠಿತ ಪಂಜಾಬ್​ ನ್ಯಾಷನಲ್​ ಬ್ಯಾಂಕ್​ ತನ್ನ ಗ್ರಾಹಕರಿಗಾಗಿ ಹೊಸ ಯೋಜನೆಯೊಂದನ್ನು ಪರಿಚಯಿಸಿದೆ. ಈ ಯೋಜನೆಯ ಮೂಲಕ ಬ್ಯಾಂಕ್​ ತನ್ನ ಗ್ರಾಹಕರಿಗೆ ಆರ್ಥಿಕ ಸಹಾಯವನ್ನು ನೀಡಲಿದೆ. ನೀವೇನಾದರೂ ಹೊಸ ಉದ್ಯಮವನ್ನು ಆರಂಭಿಸುವ ಯೋಜನೆಯನ್ನು ಹೊಂದಿದ್ದರೆ ಇದು ನಿಮಗೆ ನಿಜಕ್ಕೂ ಲಾಭದಾಯಕ ಸುದ್ದಿಯಾಗಲಿದೆ. ಪಂಜಾಬ್​ ನ್ಯಾಷನಲ್​ ಬ್ಯಾಂಕ್​​ನ ಈ ಯೋಜನೆಯ ಹೆಸರು ಪಿಎನ್​ಬಿ ತತ್ಕಾಲ್​​ ಯೋಜನೆ ಎಂದಾಗಿದೆ. ಬ್ಯಾಂಕ್​​ ಈ ಯೋಜನೆಯ ಮೂಲಕ ನಿಮಗೆ 5 ಲಕ್ಷ ರೂಪಾಯಿಗಳಿಂದ 25 ಲಕ್ಷ ರೂಪಾಯಿಗಳವರೆಗೆ ಆರ್ಥಿಕ ನೆರವು ನೀಡಲಿದೆ. ಹಾಗಾದರೆ ಈ ಯೋಜನೆಯ ಲಾಭ ಪಡೆಯೋದು ಹೇಗೆ ಅನ್ನೋದನ್ನ ತಿಳಿದುಕೊಳ್ಳೋಣ. 

ವಿಶೇಷವಾಗಿ ವ್ಯಾಪಾರಿಗಳನ್ನ ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ಆರಂಭಿಸಲಾಗಿದೆ. ಬ್ಯಾಂಕ್​ನ ಕಡೆಯಿಂದ ವ್ಯಾಪಾರಿಗಳಿಗೆ ಈ ಯೋಜನೆಯ ಮೂಲಕ ಸಾಲ ಸೌಲಭ್ಯ ನೀಡಲಾಗುತ್ತದೆ. ಈ ಸಾಲ ಸೌಲಭ್ಯದ ಮೂಲಕ ನೀವು ಕೇವಲ ವ್ಯಾಪಾರವನ್ನ ಮಾತ್ರ ಅಭಿವೃದ್ಧಿ ಮಾಡಬಹುದಾಗಿದೆ.  ಆಸ್ತಿ ಖರೀದಿ ಈ ಸಾಲ ಸೌಲಭ್ಯವನ್ನು ಬಳಸುವಂತಿಲ್ಲ.

ಪಿಎನ್​ಬಿ ಟ್ವೀಟ್​ ಮೂಲಕ ಈ ಯೋಜನೆಯ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಿದೆ. ತಮ್ಮ ಟ್ವೀಟ್​ನಲ್ಲಿ ಪಿಎನ್​ಬಿ ತತ್ಕಾಲ್​ ಯೋಜನೆಯ ಮೂಲಕ ನೀವು ಸಾಲ ಸೌಲಭ್ಯವನ್ನು ಪಡೆಯಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ https://tinyurl.com/6r92wkcw ಲಿಂಕ್​ ಮೇಲೆ ಕ್ಲಿಕ್​ ಮಾಡಿ ಎಂದು ಬರೆಯಲಾಗಿದೆ.

ಬ್ಯಾಂಕ್​ನ ಕಡೆಯಿಂದ ಈ ಸಾಲ ಸೌಲಭ್ಯವನ್ನು ಯಾವುದೇ ವ್ಯಕ್ತಿ, ಫರ್ಮ್​, ಕೋ ಆಪರೇಟಿವ್​ ಸೊಸೈಟಿ, ಕಂಪನಿ, ಟ್ರಸ್ಟ್​​ಗಳಿಗೆ ನೀಡಲಾಗುತ್ತದೆ. ಈ ಯೋಜನೆಯ ಮೂಲಕ ಸಾಲವನ್ನು ಪಡೆಯುವ ಗ್ರಾಹಕರ ಬಳಿ ಜಿಎಸ್​ಟಿ ಸಂಖ್ಯೆ ಇರೋದು ಅನಿವಾರ್ಯವಾಗಿದೆ. ಇದರ ಜೊತೆಯಲ್ಲಿ ಕನಿಷ್ಟ 1 ವರ್ಷ ಜಿಎಸ್​ಟಿ ಫೈಲ್​ ಮಾಡಲೇಬೇಕು. ನೀವು ಇದನ್ನ ಕ್ಯಾಶ್​ ಕ್ರೆಡಿಟ್​ ಅಥವಾ ಟರ್ಮ್​ ಲೋನ್​​ ರೀತಿಯಲ್ಲಿ ಪಡೆಯಬಹುದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...