ಸ್ನೇಹಿತರ, ಪ್ರೀತಿಪಾತ್ರರ ಹುಟ್ಟುಹಬ್ಬದಂದು ಮುಖಕ್ಕೆ ಕೇಕ್ ಮೆತ್ತುವುದು ಸಾಮಾನ್ಯವಾಗಿದೆ. ಹಲವು ಮಂದಿ ಸ್ನೇಹಿತರ ಕತ್ತು ಹಿಡಿದು ಕೇಕ್ ಗೆ ಮುಖವನ್ನು ಹೊಡೆದು ಬಿಡುತ್ತಾರೆ. ಮೋಜಿಗಾಗಿ ಮಾಡಿದರೂ ಕೇಕ್ ವ್ಯರ್ಥವಾಗುವುದಷ್ಟೇ ಅಲ್ಲ ಅಪಾಯಕಾರಿಯೂ ಹೌದು.
ಇನ್ಮುಂದೆ ಈ ರೀತಿ ಕೇಕ್ ಮೆತ್ತುವ ಮುನ್ನ ಹುಷಾರ್ ಆಗಿರಿ. ಸ್ವಲ್ಪ ಎಡವಟ್ಟಾದರೂ ನಿಮ್ಮ ಸ್ಮೇಹಿತರಿಗೆ ಆಪತ್ತು ಗ್ಯಾರಂಟಿ.. ಅರೆ ಏನಿದು ಅಂತೀರಾ..? ಹಾಗಿದ್ರೆ ಮುಂದೆ ಓದಿ…
ಇಲ್ಲೊಂದೆಡೆ ಮಹಿಳೆಯೊಬ್ಬಳು ತನ್ನ ಜನ್ಮದಿನವನ್ನು ಖುಷಿ ಖುಷಿಯಿಂದ ಸ್ನೇಹಿತರ ಜೊತೆ ಆಚರಿಸಿದ್ದಾಳೆ. ಆದರೆ ಈ ಹುಟ್ಟುಹಬ್ಬ ಅವಳಿಗೆ ಮರೆಯಲಾರದ ಘಟನೆಗೆ ಸಾಕ್ಷಿಯಾಯಿತು. ಅದೇನಪ್ಪ ಅಂದ್ರೆ, ಮಹಿಳೆಯು ಇನ್ನೇನು ಕೇಕ್ ಕಟ್ ಮಾಡಿ ಸ್ನೇಹಿತರ ಬಾಯಿಗಿಡಬೇಕು ಅನ್ನುವಷ್ಟರಲ್ಲಿ, ಮೋಜಿಗಾಗಿ ಸ್ನೇಹಿತರು ಈಕೆಯ ಮುಖವನ್ನು ಕೇಕ್ ಗೆ ಹೊಡೆದಿದ್ದಾರೆ.
ಈ ವೇಳೆ ಮಹಿಳೆಯು ಜೋರಾಗಿ ನೋವಿನಿಂದ ಕಿರುಚಿದ್ದಾಳೆ. ಏನಾಯ್ತು ಎಂದು ನೋಡಿದಾಗ ಆಕೆಯ ಕಣ್ಣಿನ ರೆಪ್ಪೆಯಲ್ಲಿ ಕಡ್ಡಿ ಚುಚ್ಚಿಕೊಂಡಿತ್ತು. ಅಲ್ಲದೆ ದರದರನೇ ಕಣ್ಣು ರೆಪ್ಪೆಯಿಂದ ರಕ್ತ ಹರಿದಿದೆ. ಕೂಡಲೇ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಅದೃಷ್ಟವಶಾತ್ ಆಕೆಯ ಕಣ್ಣಿಗೇನು ಅಪಾಯವಾಗಿಲ್ಲ, ದೃಷ್ಟಿ ಕಳೆದುಕೊಂಡಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
BIG NEWS: ಬಿ.ಎಸ್.ವೈ ಭೇಟಿಯಾದ ಬಿ ಎಸ್ ಪಿ ಶಾಸಕ; ಶೀಘ್ರದಲ್ಲಿ ಬಿಜೆಪಿ ಸೇರ್ಪಡೆ ಘೋಷಣೆ ಎಂದ ಎನ್.ಮಹೇಶ್
ಸದ್ಯ ಘಟನೆಯ ಫೋಟೋವನ್ನು ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಭಾರಿ ವೈರಲ್ ಆಗಿದೆ. ಫೋಟೋದಲ್ಲಿ ಕೇಕ್ ನಲ್ಲಿ ಮರದ ಕಡ್ಡಿಗಳು ಇರುವುದನ್ನು ಕಾಣಬಹುದು. ಇದರ ಅಂಚು ಬಹಳ ಚೂಪಾಗಿದೆ. ಇನ್ನೊಂದು ಚಿತ್ರದಲ್ಲಿ ಒಂದು ಮರದ ಕಡ್ಡಿ, ಮಹಿಳೆಯ ಕಣ್ಣಿನ ರೆಪ್ಪೆಯ ಅಂಚಿನಲ್ಲಿ ಸಿಲುಕಿಕೊಂಡಿರುವುದನ್ನು ಕಾಣಬಹುದು.
ಸಾಮಾನ್ಯಾಗಿ ಬಹು ಪದರದ ಕೇಕ್ ಗಳಿಗೆ ಮರದ ಕಡ್ಡಿಗಳನ್ನು ಹಾಕಿರುತ್ತಾರೆ. ಕೇಕ್ ಬೀಳದಿರಲಿ ಎಂದು ಈ ರೀತಿ ಮಾಡಿರುತ್ತಾರೆ. ಇನ್ಮುಂದೆ ಸ್ನೇಹಿತರಿಗೆ ಕೇಕ್ ಮೆತ್ತುವ ಮುನ್ನ ಹುಷಾರ್ ಆಗಿರಿ. ಒಂದು ಕ್ಷಣದ ಮೋಜಿನಿಂದ ನಿಮ್ಮ ಸ್ನೇಹಿತರ ದೃಷ್ಟಿಯೇ ಹೋಗಬಹುದು ಎಚ್ಚರ.