
ಅಮೆರಿಕಾದಲ್ಲಿ ಓದುತ್ತಿರುವ ವಿದೇಶಿ ವಿದ್ಯಾರ್ಥಿಗಳಿಗೆ ಬೇಸರದ ಸುದ್ದಿಯೊಂದಿದೆ. ವಿದ್ಯಾಭ್ಯಾಸದ ನಂತ್ರ ಅಮೆರಿಕಾದಲ್ಲಿ ಉಳಿಯಲು ಅವಕಾಶ ನೀಡುವುದ್ರ ವಿರುದ್ಧ ಶಾಸಕರು ಮತ್ತೊಮ್ಮೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನಲ್ಲಿ ಮಸೂದೆ ಮಂಡಿಸಿದ್ದಾರೆ. ಇದ್ರಿಂದಾಗಿ ಅಮೆರಿಕಾದಲ್ಲಿ ವಿದ್ಯಾಭ್ಯಾಸ ಮಾಡ್ತಿರುವ ವಿದ್ಯಾರ್ಥಿಗಳಿಗೆ ಹಿನ್ನಡೆಯಾಗಿದೆ.
ಸಂಸದ ಗೋಸರ್, ಫೇರ್ನೆಸ್ ಫಾರ್ ಹೈ-ಸ್ಕಿಲ್ಡ್ ಅಮೆರಿಕನ್ ಮಸೂದೆ ಮಂಡಿಸಿದ್ರು. ಈ ಮಸೂದೆ ಅಂಗೀಕಾರವಾದಲ್ಲಿ ಐಚ್ಛಿಕ ಅಭ್ಯಾಸ ತರಬೇತಿಗಾಗಿ ವಲಸೆ ಮತ್ತು ರಾಷ್ಟ್ರೀಯತೆ ಕಾಯ್ದೆಯನ್ನು ತಿದ್ದುಪಡಿ ಮಾಡಲು ಸಾಧ್ಯವಾಗುತ್ತದೆ.
ಗೋಸರ್ ಮೊದಲು 116 ನೇ ಸಂಸತ್ತಿನಲ್ಲಿ ‘ಫೇರ್ನೆಸ್ ಫಾರ್ ಹೈ ಸ್ಕಿಲ್ಡ್ ಅಮೆರಿಕನ್ ಆಕ್ಟ್’ ಪರಿಚಯಿಸಿದ್ದರು. ಒಪಿಟಿ ರದ್ದುಗೊಳಿಸಲು ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆಯ ವಿರುದ್ಧದ ಮೊಕದ್ದಮೆಯಲ್ಲಿ, ಅಮೆರಿಕನ್ ಕಾರ್ಮಿಕರ ಬೆಂಬಲಕ್ಕಾಗಿ ಎರಡು ಬಾರಿ ಅಮಿಕಸ್ ಬ್ರೀಫ್ ಗೆ ಸಹಿ ಹಾಕಿದ್ದರು. ಪದವಿಯ ನಂತರ ಮೂರು ವರ್ಷಗಳ ಕಾಲ 100,000 ಕ್ಕೂ ಹೆಚ್ಚು ವಿದೇಶಿ ವಿದ್ಯಾರ್ಥಿಗಳಿಗೆ ಯುನೈಟೆಡ್ ಸ್ಟೇಟ್ಸ್ ನಲ್ಲಿ ಕೆಲಸ ಮಾಡಲು ಅವಕಾಶ ನೀಡಲಾಗಿದೆ. ಇದು ಒಪಿಟಿ ಎಚ್ -1 ಬಿ ಮಿತಿಯನ್ನು ಮೀರಿದೆ ಎಂದು ಗೋಸರ್ ಆರೋಪಿಸಿದ್ದಾರೆ.