ನವದೆಹಲಿ: ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿ ಬಸವರಾಜ್ ಬೊಮ್ಮಾಯಿ ದೆಹಲಿಗೆ ತೆರಳಿದ್ದು, ಸಿಎಂ ದೆಹಲಿ ಭೇಟಿಗೂ ಮೊದಲೇ ಸಚಿವಾಕಾಂಕ್ಷಿಗಳು ರಾಷ್ಟ್ರ ರಾಜಧಾನಿಯಲ್ಲಿ ಬೀಡುಬಿಟ್ಟಿದ್ದಾರೆ.
ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಮಂತ್ರಿ ಸ್ಥಾನಕ್ಕಾಗಿ ನೇರವಾಗಿ ವರಿಷ್ಠರ ಬಳಿ ಲಾಬಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಕುಮಾರಸ್ವಾಮಿ, ಈ ಹಿಂದೆ 17 ಶಾಸಕರಿಗೆ ಮಂತ್ರಿ ಸ್ಥಾನ ನೀಡಲೇಬೇಕು ಎಂಬ ಅನಿವಾರ್ಯ ಇತ್ತು ಹಾಗಾಗಿ ನಾವೆಲ್ಲ ತಾಳ್ಮೆಯಿಂದ ಇದ್ದೆವು. ಆದರೆ ಈಗ ಪರಿಸ್ಥಿತಿ ಬದಲಾಗಿ, ಸಿಎಂ ಕೂಡ ಬದಲಾಗಿದ್ದಾರೆ. ಈಗ ನಮಗೆ ಮಂತ್ರಿ ಸ್ಥಾನ ನೀಡಬೇಕು ಎಂಬುದು ನಮ್ಮ ಬೇಡಿಕೆ ಎಂದರು.
BREAKING NEWS: ಸಂಪುಟ ರಚನೆ ಬಗ್ಗೆ ಮಾಜಿ ಸಿಎಂ BSY ಮಹತ್ವದ ಮಾಹಿತಿ
ಅಮಿತ್ ಶಾ, ಜೆ.ಪಿ.ನಡ್ಡಾ ಭೇಟಿಗೆ ಸಮಯ ಕೇಳಿದ್ದು, ಇನ್ನೂ ಹಲವು ಹಿರಿಯರನ್ನು ಭೇಟಿಯಾಗಿ ಚರ್ಚಿಸುವುದಾಗಿ ತಿಳಿಸಿದರು. ಒಟ್ಟಾರೆ ಸಿಎಂ ದೆಹಲಿ ಭೇಟಿ ವೇಳೆಯೇ ಸಚಿವಾಕಾಂಕ್ಷಿಗಳು ವರಿಷ್ಠರ ಮೂಲಕ ಒತ್ತಡ ಹೇರುವ ತಂತ್ರ ನಡೆಸಿದ್ದಾರೆ.