ತನ್ನ ಮದುವೆ ವೇಳೆ ಭಾವೀ ಅತ್ತೆ ಸಿಕ್ಕಾಪಟ್ಟೆ ಸೀನ್ ಸೃಷ್ಟಿ ಮಾಡಬಹುದೆಂದು ಚಿಂತಿಸುತ್ತಿರುವ ಯುವತಿಯೊಬ್ಬಳು, ತನ್ನ ಅತ್ತೆಗಾಗಿ ವೆಡ್ಡಿಂಗ್ ಡೇಟ್ ಆಗಲು ಇಚ್ಛಿಸುವ ವ್ಯಕ್ತಿಯೊಬ್ಬರಿಗಾಗಿ ಹುಡುಕುತ್ತಿದ್ದಾಳೆ.
ಈ ಕುರಿತು ಜಾಹೀರಾತೊಂದನ್ನು ಮದುಮಗಳು ಹಾಕಿದ್ದು, ಅದೀಗ ರೆಡ್ಡಿಟ್ ಹಾಗೂ ಫೇಸ್ಬುಕ್‌ನಲ್ಲಿ ವೈರಲ್ ಆಗಿದೆ. ಈ ಕೆಲಸಕ್ಕೆಂದು $1000 ಪಾವತಿ ಮಾಡಲು ಮದುಮಗಳು ಸಿದ್ಧಳಿದ್ದಾಳೆ.
ಮೋದಿ ಸರ್ಕಾರದಿಂದ ಭರ್ಜರಿ ಸುದ್ದಿ: ಖಾಸಗಿ, ಸರ್ಕಾರಿ ಉದ್ಯೋಗಿಗಳಿಗೆ ಬಂಪರ್ ಗಿಫ್ಟ್
“ಹಲೋ! ಹಡ್ಸನ್ ವ್ಯಾಲಿಯಲ್ಲಿ ಆಗಸ್ಟ್‌ನಲ್ಲಿ ನಡೆಯಲಿರುವ ಮದುವೆ ವೇಳೆಗೆ ನಾನು ನನ್ನ ಅತ್ತೆಗಾಗಿ ಶುಕ್ರವಾರ ಸಂಜೆಯಿಂದ ಶನಿವಾರ ಸಂಜೆವರೆಗೂ ವೆಡ್ಡಿಂಗ್ ಡೇಟ್‌ಗಾಗಿ ಹುಡುಕುತ್ತಿದ್ದೇನೆ. ಆಕೆಗೆ ನಿರಂತರ ಗಮನ ಹಾಗೂ ಉಸ್ತುವಾರಿಯ ಅಗತ್ಯವಿದೆ. ಆಕೆ ಬಹುಶಃ ಬಿಳಿ ಧಿರಸಿನಲ್ಲಿ ಬಂದು ಸಣ್ಣ ಪುಟ್ಟ ಡ್ರಾಮಾಗಳನ್ನು ಮಾಡಬಹುದು. ನಿಮ್ಮ ಕೆಲಸ ಏನೆಂದರೆ ಸುಮ್ಮನೇ ಇದನ್ನು ತಣ್ಣಗೆ ಮಾಡುವುದು. ಆಕೆಯನ್ನು ಎರಡು ದಿನಗಳ ಕಾಲ ಮರಳು ಮಾಡಿ ಆರಾಮಾಗಿ $1000 ಸಂಪಾದಿಸಿ,” ಎಂದು ಜಾಹೀರಾತಿನಲ್ಲಿ ಪೋಸ್ಟ್ ಮಾಡಿದ್ದಾಳೆ ಮದುಮಗಳು.