ಜಿಯಾಂಗ್ಸು: ವಿಪರೀತ ಮಲಬದ್ಧತೆಯಿಂದ ಹತಾಶೆಯಾಗಿದ್ದ ವ್ಯಕ್ತಿಯೊಬ್ಬ 20 ಸೆಂ.ಮೀ ಉದ್ದದ ಹಾವು ಮೀನನ್ನು ತನ್ನ ಗುದದ್ವಾರದಿಂದ ಗುದನಾಳಕ್ಕೆ ಸೇರಿಸಿರುವ ಆಘಾತಕಾರಿ ಘಟನೆ ಚೀನಾದ ಕ್ಸಿಂಗ್ಹುವಾ ಪ್ರಾಂತ್ಯದಲ್ಲಿ ನಡೆದಿದೆ.
ಸಾಂಪ್ರದಾಯಿಕ ಮದ್ದಿನಿಂದ ಪ್ರೇರೇಪಿತಗೊಂಡ ವ್ಯಕ್ತಿ ಈ ರೀತಿ ಅವಾಂತರ ಮಾಡಿಕೊಂಡಿದ್ದಾನೆ. ಈ ಸಾಂಪ್ರದಾಯಿಕ ಮದ್ದಿನಲ್ಲಿ ಕರುಳಿನ ಚಲನೆಗೆ ಈಲ್ ( ಹಾವು ಮೀನು ) ಸಹಾಯ ಮಾಡುತ್ತದೆ ಎಂದು ಹೇಳುತ್ತದಂತೆ. ಹೀಗಾಗಿ ಮಲಬದ್ಧತೆಯಿಂದ ಶೀಘ್ರ ಪರಿಹಾರ ಪಡೆಯಲು ಗುದದ್ವಾರದ ಮುಖಾಂತರ ಹಾವು ಮೀನನ್ನು ಹಾಕಿದ್ದು, ಇದೀಗ ತನ್ನ ಜೀವಕ್ಕೆ ಗಂಡಾಂತರ ತಂದೊಕೊಂಡಿದ್ದಾನೆ.
ನಡುರಸ್ತೆಯಲ್ಲೇ ಅಮಾಯಕನ ಮೇಲೆ ಹಲ್ಲೆ ನಡೆಸಿ ಕೊಲೆಗೈದ ಪೊಲೀಸ್ ಪೇದೆ: ವಿಡಿಯೋ ವೈರಲ್
ಆರಂಭದಲ್ಲಿ ವೈದ್ಯರನ್ನು ಭೇಟಿ ಮಾಡಲು ಸಂಕೋಚ ಪಟ್ಟಿದ್ದಾನೆ. ಆದರೆ ವಿಪರೀತ ನೋವನ್ನು ಅನುಭವಿಸಿದ ಬಳಿಕ ಆಸ್ಪತ್ರೆಗೆ ಭೇಟಿ ನೀಡಲು ನಿರ್ಧರಿಸಿದನಂತೆ. ವೈದ್ಯರು ಶಸ್ತ್ರಚಿಕಿತ್ಸೆ ಮುಖಾಂತರ ಹಾವು ಮೀನನ್ನು ಹೊರತೆಗೆದಿದ್ದಾರೆ. ಆಶ್ಚರ್ಯ ಅಂದ್ರೆ, ಈತನ ಹೊಟ್ಟೆಯಿಂದ ತೆಗೆಯಬೇಕಾದರೆ ಹಾವು ಮೀನು ಜೀವಂತವಾಗಿತ್ತಂತೆ.
ಇನ್ನು ದೊಡ್ಡ ಕರುಳಿನಲ್ಲಿರುವ ಬ್ಯಾಕ್ಟೀರಿಯಾವು ಕಿಬ್ಬೊಟ್ಟೆಯ ಕುಹರವನ್ನು ತಲುಪಿದಾಗ ಹಿಮೋಲಿಸಿಸ್‌ಗೆ ಕಾರಣವಾಗುವುದರಿಂದ ರೋಗಿಯು ತನ್ನ ಪ್ರಾಣವನ್ನು ಕಳೆದುಕೊಂಡಿರಬಹುದು ಎಂದು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಹೇಳಿದ್ದಾರೆ.