ಬೇಕಾಗುವ ಸಾಮಾಗ್ರಿಗಳು:
ಸಾಸಿವೆ – ಸ್ವಲ್ಪ, ಜೀರಿಗೆ – ಅರ್ಧ ಟೀ ಸ್ಪೂನ್, ಶುಂಠಿ – ಒಂದು ಟೀ ಸ್ಪೂನ್, ಎಣ್ಣೆ – ಸ್ವಲ್ಪ, ಈರುಳ್ಳಿ – 1, ಹಸಿಮೆಣಸಿನಕಾಯಿ – 2, ಗೋಡಂಬಿ – 2 ಟೀ ಸ್ಪೂನ್, ಕ್ಯಾರೆಟ್ – ಅರ್ಧ ಕಪ್, ರವೆ – 1 ಕಪ್, ಮೊಸರು – 1 ಕಪ್, ರುಚಿಗೆ ತಕ್ಕಷ್ಟು ಉಪ್ಪು, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು- ಸ್ವಲ್ಪ,
ಮಾಡುವ ವಿಧಾನ:
ಒಂದು ಪ್ಯಾನ್ ಗೆ ಸ್ವಲ್ಪ ಎಣ್ಣೆ ಹಾಕಿ ಕಾದ ಬಳಿಕ ಸಾಸಿವೆ ಸ್ವಲ್ಪ, ಅರ್ಧ ಟೀ ಸ್ಪೂನ್ ಜೀರಿಗೆ, ಒಂದು ದೊಡ್ಡ ಚಮಚ ಆಗುವಷ್ಟು ಸಣ್ಣಗೆ ಹೆಚ್ಚಿದ ಶುಂಠಿಯನ್ನು ಹಾಕಿ ಸ್ವಲ್ಪ ಹುರಿದುಕೊಳ್ಳಿ. ನಂತರ ಒಂದು ಈರುಳ್ಳಿ ಹೆಚ್ಚಿ ಹಾಕಿ ಫ್ರೈ ಮಾಡಿ. ನಂತರ ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿಯನ್ನು ಸೇರಿಸಿ, 2 ಟೀ ಸ್ಪೂನ್ ನಷ್ಟು ಗೋಡಂಬಿ, ಅರ್ಧ ಕಪ್ ಕ್ಯಾರೆಟ್ ಹಾಕಿ ಫ್ರೈ ಮಾಡಿ.
ಹಲಸಿನಕಾಯಿ ಚಿಪ್ಸ್ ಮಾಡುವ ವಿಧಾನ
ಇನ್ನೊಂದು ಪಾತ್ರೆಗೆ ಒಂದು ಕಪ್ ರವೆ ಹಾಕಿ ಅದಕ್ಕೆ 1 ಕಪ್ ನಷ್ಟು ಮೊಸರು ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸ್ವಲ್ಪ ಹಾಗು ಹುರಿದಿರುವ ಕ್ಯಾರೆಟ್ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ, ನೀರು ಬೇಕಿದ್ದರೆ ಸೇರಿಸಿ. ಆದರೆ ಜಾಸ್ತಿ ಬೇಡ, ಸ್ವಲ್ಪ ದಪ್ಪಗೆ ಇರಲಿ. ಅರ್ಧ ಗಂಟೆಗಳ ಕಾಲ ಈ ಪಾತ್ರೆಗೆ ಮುಚ್ಚಳ ಹಾಕಿ ಮುಚ್ಚಿಡಿ. ಅರ್ಧ ಗಂಟೆ ಬಳಿಕ ಬೇಕಿಂಗ್ ಸೋಡಾ ಸೇರಿಸಿ ಪಡ್ಡು ಮಾಡುವ ಕಾವಲಿಗೆ ಹಿಟ್ಟು ತುಂಬಿ. ಎರಡೂ ಕಡೆ ಸರಿಯಾಗಿ ಬೇಯಿಸಿದರೆ ರುಚಿಯಾದ ಪಡ್ಡು ಸವಿಯಲು ಸಿದ್ಧ.