ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧ ನಡೆಯುವ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಕೊಹ್ಲಿ ತಯಾರಿ ನಡೆಸುತ್ತಿದ್ದಾರೆ. ಈ ಮಧ್ಯೆ ಕೊಹ್ಲಿ ವಿವಾದವೊಂದಕ್ಕೆ ಸಿಲುಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿರಾಟ್ ಕೊಹ್ಲಿ ಹಾಕಿರುವ ಪೋಸ್ಟ್ ಈಗ ವಿವಾದಕ್ಕೆ ಕಾರಣವಾಗಿದೆ.
ವಿರಾಟ್ ಕೊಹ್ಲಿ, ಬುಧವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಖಾಸಗಿ ವಿಶ್ವವಿದ್ಯಾಲಯದ ಬಗ್ಗೆ ಬರೆದಿದ್ದಾರೆ. ಟೋಕಿಯೊ ಒಲಿಂಪಿಕ್ಸ್ ನಲ್ಲಿ ಪಾಲ್ಗೊಂಡಿರುವ ಆಟಗಾರರ ಬಗ್ಗೆಯೂ ಉಲ್ಲೇಖಿಸಿದ್ದಾರೆ.
BIG NEWS: ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ಖಡಕ್ ತಿರುಗೇಟು; ಸಂಸ್ಕಾರ, ಗುಣ, ಸಾಮರ್ಥ್ಯ ಅವರವರ ಗಳಿಕೆ ಹೊರತು ಅಪ್ಪನಿಂದ ಬರುವುದಲ್ಲ; ವಿಪಕ್ಷ ನಾಯಕನಿಗೆ ಚಾಟಿ ಬೀಸಿದ ಕೇಸರಿ ಪಾಳಯ
ವಿರಾಟ್ ಕೊಹ್ಲಿಯ ಈ ಪೋಸ್ಟ್, ಎಎಸ್ಸಿಐ ವಿರುದ್ಧವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಶೀಘ್ರದಲ್ಲೇ ಎಎಸ್ಸಿಐ, ಕೊಹ್ಲಿಗೆ ನೊಟೀಸ್ ನೀಡುವ ಸಾಧ್ಯತೆಯಿದೆ. ವಿರಾಟ್ ಕೊಹ್ಲಿಯ ಪೋಸ್ಟ್ ಎಎಸ್ಸಿಐ ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಭಾರತದ ಒಲಿಂಪಿಕ್ಸ್ ಆಟಗಾರರಲ್ಲಿ ಶೇಕಡಾ 10ರಷ್ಟು ಮಂದಿ ಲವ್ಲಿ ಪ್ರೊಫೇಶನಲ್ ವಿಶ್ವವಿದ್ಯಾಲಯದವರು. ಎಲ್ಪಿಯು ಶೀಘ್ರದಲ್ಲೇ ತನ್ನ ವಿದ್ಯಾರ್ಥಿಗಳನ್ನು ಭಾರತೀಯ ಕ್ರಿಕೆಟ್ ತಂಡಕ್ಕೂ ಕಳುಹಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಜೈ ಹಿಂದ್’ ಎಂದು ಕೊಹ್ಲಿ ಪೋಸ್ಟ್ ಹಾಕಿದ್ದಾರೆ.