ಇತ್ತೀಚಿನ ದಿನಗಳಲ್ಲಿ ಜನರು ಮೊಬೈಲ್ ಕರೆಗಿಂತ ಹೆಚ್ಚು ಡೇಟಾ ಬಳಕೆ ಮಾಡ್ತಿದ್ದಾರೆ. ಗ್ರಾಹಕರ ಡೇಟಾ ಬೇಡಿಕೆಯನ್ನು ಪೂರೈಸಲು ಟೆಲಿಕಾಂ ಕಂಪನಿಗಳು ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ನೀಡ್ತಿವೆ.
ಟೆಲಿಕಾಂ ಕಂಪನಿಗಳ ಮಧ್ಯೆ ಡೇಟಾ ಯುದ್ಧ ಈಗ್ಲೂ ಮುಂದುವರೆದಿದೆ. 250 ರೂಪಾಯಿಗಿಂತ ಕಡಿಮೆ ಬೆಲೆಗೆ ಅನೇಕ ಟೆಲಿಕಾಂ ಕಂಪನಿಗಳು ಹೆಚ್ಚು ಡೇಟಾ ನೀಡ್ತಿವೆ. ಈ ಯೋಜನೆಗಳು 30 ಮತ್ತು 60 ದಿನಗಳ ಮಾನ್ಯತೆಯೊಂದಿಗೆ ಬರುತ್ತವೆ. ರಿಲಯನ್ಸ್ ಜಿಯೋ ಇತ್ತೀಚೆಗೆ ಒಂದು ಯೋಜನೆಯನ್ನು ಪ್ರಾರಂಭಿಸಿದೆ. 247 ರೂಪಾಯಿಗಳ ಈ ಯೋಜನೆಯಲ್ಲಿ 25 ಜಿಬಿ ಡೇಟಾ ಸಿಗ್ತಿದೆ. 30 ದಿನಗಳ ಮಾನ್ಯತೆಯೊಂದಿಗೆ ಈ ಯೋಜನೆ ಸಿಗ್ತಿದೆ.
ಏರ್ಟೆಲ್ 250 ರೂಪಾಯಿಗಿಂತ ಕಡಿಮೆ ಬೆಲೆಗೆ ಮೂರು ಯೋಜನೆಗಳನ್ನು ನೀಡುತ್ತದೆ. ಈ ಯೋಜನೆಗಳ ಬೆಲೆ 98 ರೂಪಾಯಿ. 131 ರೂಪಾಯಿ ಮತ್ತು 248 ರೂಪಾಯಿ. 98 ರೂಪಾಯಿ ಯೋಜನೆಯಲ್ಲಿ 12 ಜಿಬಿ ಡೇಟಾ ಲಭ್ಯವಿದೆ. 131 ರೂಪಾಯಿ ಯೋಜನೆಯು 100ಎಂಬಿ ಡೇಟಾ, ಅಮೆಜಾನ್ ಪ್ರೈಮ್ಗೆ ಒಂದು ತಿಂಗಳ ಪ್ರವೇಶ, ಉಚಿತ ಹಲೋ ಟ್ಯೂನ್ಸ್, ಏರ್ಟೆಲ್ ಎಕ್ಸ್ಸ್ಟ್ರೀಮ್ ಮತ್ತು ವಿಂಕ್ ಮ್ಯೂಸಿಕ್ ನೀಡುತ್ತದೆ. 248 ರೂಪಾಯಿಗಳ ಯೋಜನೆಯಲ್ಲಿ 25 ಜಿಬಿ ಡೇಟಾ ಮತ್ತು ವಿಂಕ್ ಮ್ಯೂಸಿಕ್ ಅಪ್ಲಿಕೇಶನ್ಗೆ ಪ್ರೀಮಿಯಂ ಪ್ರವೇಶ ಸಿಗಲಿದೆ.
ರಿಲಯನ್ಸ್ ಜಿಯೋ ಕೂಡ ಮೂರು ಪ್ಲಾನ್ ನೀಡ್ತಿದೆ. ಈ ಯೋಜನೆ 151 ರೂಪಾಯಿ, 201 ರೂಪಾಯಿ ಮತ್ತು 251 ರೂಪಾಯಿಗಳಿಗೆ ಲಭ್ಯವಿದೆ. ಈ ಯೋಜನೆಗಳು 30 ದಿನಗಳವರೆಗೆ 30 ಜಿಬಿ, 40 ಜಿಬಿ ಮತ್ತು 50 ಜಿಬಿ ಡೇಟಾವನ್ನು ನೀಡುತ್ತವೆ.
ಬಿಎಸ್ಎನ್ಎಲ್ 151 ರೂಪಾಯಿ ಮತ್ತು 198 ರೂಪಾಯಿ ಪ್ಲಾನ್ ನೀಡ್ತಿದೆ. 151 ರೂಪಾಯಿ ಪ್ಲಾನ್ ನಲ್ಲಿ ಪ್ರತಿದಿನ 40 ಜಿಬಿ ಮತ್ತು 198 ರೂಪಾಯಿ ಪ್ಲಾನ್ ನಲ್ಲಿ ಎರಡು ಜಿಬಿ ಡೇಟಾ ಲಭ್ಯವಿದೆ. ಇದರ ಸಿಂಧುತ್ವ ಕ್ರಮವಾಗಿ 28 ಮತ್ತು 50 ದಿನಗಳಾಗಿವೆ.