ನವದೆಹಲಿ: ಪ್ರಮುಖ ಹಣಕಾಸು ತಂತ್ರಜ್ಞಾನ ಕಂಪನಿಯಾದ ಪೇಟಿಎಂನಿಂದ ಶೀಘ್ರವೇ 20 ಸಾವಿರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಸೇಲ್ಸ್ ಎಕ್ಸಿಕ್ಯೂಟಿವ್ ಗಳಿಗೆ ಪ್ರತಿ ತಿಂಗಳು 35,000 ರೂ. ವರೆಗೂ ಸಂಪಾದನೆ ಮಾಡುವ ಅವಕಾಶವಿದೆ.
ದೇಶಾದ್ಯಂತ ಐಪಿಒಗೆ ಮೊದಲು 20,000ಕ್ಕೂ ಹೆಚ್ಚು ಸೇಲ್ಸ್ ಎಕ್ಸಿಕ್ಯೂಟಿವ್ ಗಳನ್ನು ಪೇಟಿಎಂ ನೇಮಕ ಮಾಡಿಕೊಳ್ಳಲಿದೆ. ಪೇಟಿಎಂ ವ್ಯಾಲೆಟ್, ಮರ್ಚೆಂಟ್ ಲೋನ್, ಪೇಟಿಎಂ ಪೋಸ್ಟ್ ಪೇಯ್ಡ್, ಕ್ಯೂಆರ್ ಕೋಡ್, ಪಿಓಎಸ್ ಮಷೀನ್, ಪೇಟಿಎಂ ಸೌಂಡ್ ಬಾಕ್ಸ್ ಮೊದಲಾದ ಉತ್ಪನ್ನಗಳ ಮಾರಾಟದಲ್ಲಿ ತೊಡಗಿಕೊಳ್ಳಲು ಅವಕಾಶ ಸಿಗಬಹುದಾಗಿದೆ ಎನ್ನಲಾಗಿದೆ. ಅಕ್ಟೋಬರ್ ಒಳಗೆ 16 ಸಾವಿರ ಕೋಟಿ ರೂಪಾಯಿಗಳ ಇನಿಷಿಯಲ್ ಪಬ್ಲಿಕ್ ಆಫರಿಂಗ್(IPO) ನಡೆಸಲು ಪೇಟಿಎಂ ಸಜ್ಜಾಗುತ್ತಿದ್ದು, ಇದಕ್ಕೆ ಪೂರಕವಾಗಿ ನೇಮಕಾತಿ ಮಾಡಿಕೊಳ್ಳಲಾಗುವುದು. ಫೋನ್ ಪೇ ಮತ್ತು ಗೂಗಲ್ ಪೇ ನಿಂದ ಸ್ಪರ್ಧೆ ಇದ್ದು, ಇದಕ್ಕೆ ತಕ್ಕಂತೆ ಪೇಟಿಎಂ ಕೂಡ ಸಜ್ಜಾಗುತ್ತಿದೆ ಎನ್ನಲಾಗಿದೆ.