ಫ್ರಾನ್ಸ್ನ ಇಂಜಿನಿಯರ್ ಒಬ್ಬರು ತಮ್ಮ 16 ವರ್ಷದ ಮಗನಿಗೆ ಬಾಹ್ಯಾಸ್ಥಿಯೊಂದನ್ನು ನಿರ್ಮಿಸಿ, ಗಾಲಿಕುರ್ಚಿಯಿಂದ ಎದ್ದು ಓಡಾಡಲು ಅನುವಾಗಿದ್ದಾರೆ.
ಯಾವುದೇ ಸಹಾಯವಿಲ್ಲದೇ ನಡೆದಾಡಲು ಸಾಧ್ಯವಾಗದ ಆಸ್ಕರ್ ಕಾನ್ಸ್ಟಾಂಜ಼ಾಗೆ ಆತನ ತಂದೆ ಜೀನ್-ಲೂಯಿ ಕಾನ್ಸ್ಟಾಂಜ಼ಾ ಬಾಹ್ಯಾಸ್ಥಿ (ಎಕ್ಸೋಸ್ಕೆಲಿಟನ್) ಎಂಬ ರೊಬೋಟಿಕ್ ಸೂಟ್ ರಚಿಸಿಕೊಟ್ಟಿದ್ದು, ಟೀನೇಜರ್ಗೊಂದು ಹೊಸ ಜೀವನ ಕಟ್ಟಿಕೊಟ್ಟಿದ್ದಾರೆ.
ರಸ್ತೆ ದಾಟಲು ವೃದ್ಧನಿಗೆ ಸಿಗ್ತು ಅನಿರೀಕ್ಷಿತ ಸಹಾಯ..! ವಿಡಿಯೋ ವೈರಲ್
“ಈ ಮುನ್ನ ನನಗೆ ನಡೆದಾಡಲು ಯಾರಾದರೂ ಸಹಾಯ ಮಾಡಬೇಕಿತ್ತು… ಈ ವಸ್ತುವಿನಿಂದ ನನಗೆ ಸ್ವತಂತ್ರ್ಯ ಸಿಕ್ಕಂತೆ ಭಾಸವಾಗುತ್ತಿದೆ,” ಎಂದು ಆಸ್ಕರ್ ಹೇಳಿಕೊಂಡಿದ್ದಾನೆ.