ಸ್ಕೈಡೈವಿಂಗ್ಗೆ ಪರವಾನಿಗೆ ಪಡೆದ ದೇಶದ ನಾಲ್ಕನೇ ಮಹಿಳೆ ಎಂಬ ಹೆಗ್ಗಳಿಕೆಗೆ ಗುಜರಾತ್ನ ವಡೋದರಾದ ಶ್ರೇತಾ ಪರ್ಮಾರ್ ಭಾಜನರಾಗಿದ್ದಾರೆ.
“ನನ್ನ ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತಂದಿರುವುದು ನನಗೆ ನಿಜಕ್ಕೂ ಹೆಮ್ಮೆ ಎನಿಸುತ್ತಿದೆ. ಎಲ್ಲೆಡೆಯಿಂದ ಅಭಿನಂದನೆಯ ಸಂದೇಶಗಳನ್ನು ಸ್ವೀಕರಿಸುತ್ತಿದ್ದೇನೆ ಹಾಗೂ ಜನರಿಗೆ ಸ್ಪೂರ್ತಿಯಾಗಬಲ್ಲೆ ಎನಿಸುತ್ತಿದೆ” ಎಂದು ಪರ್ಮಾರ್ ಹೇಳಿಕೊಂಡಿದ್ದಾರೆ.
ಎಸಿಬಿ ದಾಳಿ: 15 ಲಕ್ಷ ರೂ. ಲಂಚ ಪಡೆಯುತ್ತಿದ್ದ ತಹಶೀಲ್ದಾರ್ ಅರೆಸ್ಟ್
“ಸ್ಕೈಡೈವಿಂಗ್ ಅನುಭವಕ್ಕೆ ಯಾವುದೂ ಸಾಟಿಯಲ್ಲ. ಇದು ನನ್ನ ಹೃದಯಕ್ಕೆ ಹತ್ತಿರವಾಗಿರುವಂಥದ್ದು. ಈಗ ಸೂಚಕರಿಲ್ಲದೇ ಸ್ಕೈಡೈವಿಂಗ್ ಮಾಡಬೇಕೆಂದು ಅನಿಸುತ್ತದೆ, ಅದರಿಂದ ವಿಶೇಷವಾದ ಅನುಭೂತಿ ಸಿಗುತ್ತದೆ” ಎಂದು 28 ವರ್ಷದ ಸಾಧಕಿ ತಿಳಿಸಿದ್ದಾರೆ.
ಪದ್ಮಶ್ರೀ ಪುರಸ್ಕೃತೆ ರಾಷೆಲ್ ಥಾಮಸ್, ಶೀತಲ್ ಮಹಾಜನ್ ಹಾಗೂ ದೇಶದ ಮೊದಲ ಮಹಿಳಾ ಬೇಸ್ ಜಂಪರ್ ಅರ್ಚನಾ ಸರ್ದಾನಾ ಈ ಹಿಂದೆ ಸ್ಕೈಡೈವಿಂಗ್ ಲೈಸೆನ್ಸ್ ಪಡೆದ ಭಾರತದ ಮೊದಲ ಮೂವರು ಮಹಿಳೆಯರಾಗಿದ್ದಾರೆ.