ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಸದಾ ಮುಂದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಟ್ವಿಟರ್‌ನಲ್ಲಿ ಅನುಯಾಯಿಗಳ ಸಂಖ್ಯೆ ಏಳು ಕೋಟಿ ದಾಟಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚಿನ ಫಾಲೋವರ್‌ಗಳನ್ನು ಹೊಂದಿರುವ ಜಾಗತಿಕ ನಾಯಕರಲ್ಲಿ ಪ್ರಧಾನಿ ಮೋದಿ ಒಬ್ಬರಾಗಿದ್ದಾರೆ. 2009ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಿನಿಂದ ಮೋದಿ ಟ್ವಿಟರ್‌ನಲ್ಲಿ ಸಕ್ರಿಯರಾಗಿದ್ದಾರೆ. 2010ರಲ್ಲಿ ಒಂದು ಲಕ್ಷ ಫಾಲೋವರ್‌ಗಳನ್ನು ಟ್ವಿಟರ್‌ನಲ್ಲಿ ಹೊಂದಿದ್ದ ಮೋದಿ 2011ರಲ್ಲಿ ನಾಲ್ಕು ಲಕ್ಷ ಅನುಯಾಯಿಗಳನ್ನು ಹೊಂದಿದ್ದರು.
ಅಮೆರಿಕದ ಹಿಂದಿನ ಅಧ್ಯಕ್ಷ ಬರಾಕ್ ಒಬಾಮಾ 12.9 ಕೋಟಿ ಅನುಯಾಯಿಗಳನ್ನು ಟ್ವಿಟರ್‌ನಲ್ಲಿ ಹೊಂದಿದ್ದು, ಅತಿ ಹೆಚ್ಚಿನ ಫಾಲೋವರ್‌ಗಳನ್ನು ಹೊಂದಿರುವ ಜಾಗತಿಕ ನಾಯಕರಾಗಿದ್ದಾರೆ.
ಟ್ವಿಟರ್‌ನಲ್ಲಿ 2.62 ಕೋಟಿ ಅನುಯಾಯಿಗಳನ್ನು ಅಮಿತ್ ಶಾ ಹೊಂದಿದ್ದರೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ 1.94 ಕೋಟಿ ಅನುಯಾಯಿಗಳಿದ್ದಾರೆ.