alex Certify ವಿಶ್ವದ ದುಬಾರಿ ಫ್ರೆಂಚ್ ಫ್ರೈಸ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವದ ದುಬಾರಿ ಫ್ರೆಂಚ್ ಫ್ರೈಸ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ..!

ನೀವೆಂದಾದರೂ ಫ್ರೆಂಚ್ ಫ್ರೈಸ್ ತಿಂದಿದ್ದೀರಾ..? ಕೆಲವರು ಮನೆಯಲ್ಲೇ ಮಾಡಿ ಕೂಡ ತಿಂತಾರೆ. ಅಬ್ಬಬ್ಬಾ ಅಂದರೆ ಇದರ ಬೆಲೆ ಎಷ್ಟಿರಬಹುದು..? 100 ರಿಂದ 200 ರೂ.? ಜಾಸ್ತಿ ಅಂದ್ರೆ 300 ರೂ.ಗಳು ಇರಬಹುದು. ಆದ್ರೆ ಇಲ್ಲೊಂದೆಡೆ ಫ್ರೆಂಚ್ ಫ್ರೈಸ್ ಗೆ ಇರುವ ಬೆಲೆ ಕೇಳಿದ್ರೆ ನಿಮಗೆ ಶಾಕ್ ಆಗೋದು ಗ್ಯಾರಂಟಿ..!

ಮಗು ಜನನದ ಬಳಿಕ ನಿಶ್ಚಿತ ವರನೊಂದಿಗೆ ಬ್ರೇಕಪ್​ ಮಾಡಿಕೊಂಡ್ರಾ ಆ್ಯಮಿ ಜಾಕ್ಸನ್​…!?

ಹೌದು, ಅಮೆರಿಕಾದ ನ್ಯೂಯಾರ್ಕ್ ನಗರದಲ್ಲಿರುವ ರೆಸ್ಟೋರೆಂಟ್ ಒಂದರಲ್ಲಿ ಫ್ರೆಂಚ್ ಫ್ರೈಸ್ ಬೆಲೆ ಕೇಳಿದ್ರೆ ತಲೆತಿರುಗೋದು ಪಕ್ಕಾ……ಮಾಮೂಲಿ ಫ್ರೆಂಚ್ ಫ್ರೈಗಿಂತ ಇದು ಸ್ವಲ್ಪ ವಿಭಿನ್ನವಾಗಿ, ವಿಶೇಷವಾಗಿದೆ. ಹೀಗಾಗಿ ಇದನ್ನು ನೀವು ತಿನ್ನಬೇಕೆಂದರೆ 200 ಡಾಲರ್ ಅಂದರೆ 14,800 ರೂ.ಗಳನ್ನು ಪಾವತಿಸಬೇಕು. ಇಷ್ಟು ಹಣ ಪಾವತಿ ಮಾಡಿದರೆ ಮಾತ್ರ ನೀವು ಈ ವಿಶೇಷ ಫ್ರೆಂಚ್ ಫ್ರೈ ಯನ್ನು ಸವಿಯಬಹುದು.

ಇದು ವಿಶ್ವದ ದುಬಾರಿ ಫ್ರೆಂಚ್ ಫ್ರೈಸ್ ಆಗಿದೆ. ಆಲೂಗಡ್ಡೆ ಫ್ರೈ ಮಾಡಿ ಅದಕ್ಕೆ 23 ಕ್ಯಾರೆಟ್ ಚಿನ್ನವನ್ನು ಪೌಡರ್ ತರಹ ಉದುರಿಸಲಾಗಿದ್ದು, ನೋಡಲು ಆಕರ್ಷಕವಾಗಿದೆ. ಈ ರೆಸ್ಟೋರೆಂಟ್ ಈಗಾಗಲೇ ಅತ್ಯಂತ ದುಬಾರಿ ಬರ್ಗರ್ ಹಾಗೂ ಐಸ್ ಕ್ರೀಂ ತಯಾರಿಸಿದ್ದಕ್ಕಾಗಿ ವಿಶ್ವ ದಾಖಲೆ ಬರೆದಿತ್ತು. ಇದೀಗ ಅತ್ಯಂತ ದುಬಾರಿ ಫ್ರೆಂಚ್ ತಯಾರಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...