ಚಿತ್ರದುರ್ಗ: ನೂತನ ಮುಖ್ಯಮಂತ್ರಿ ಆಯ್ಕೆಯಿಂದಾಗಿ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ನಿವಾರಣೆಯಾಗಿದೆ. ಬಸವರಾಜ್ ಬೊಮ್ಮಾಯಿ ಆಯ್ಕೆಯಿಂದ ಮಠಾಧೀಶರ ಧ್ವನಿಗೆ ಪೂರಕ ಪ್ರತಿಕ್ರಿಯೆ ದೊರೆತಂತಾಗಿದೆ ಎಂದು ಚಿತ್ರದುರ್ಗದ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟಿದ್ದಾರೆ.
ʼಗೂಗಲ್ʼ ಮೂಲಕ ಪ್ರತಿ ತಿಂಗಳು ಗಳಿಸ್ಬಹುದು ಕೈ ತುಂಬಾ ಹಣ
ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯವರನ್ನಾಗಿ ಆಯ್ಕೆ ಮಾಡುವ ಮೂಲಕ ಬಿಜೆಪಿ ಹೈಕಮಾಂಡ್ ಜಾಣ್ಮೆ, ಪ್ರಬುದ್ಧ ನಡೆ ತೋರಿದೆ. ಇದರಿಂದ ರಾಜಕೀಯ ಅಸ್ಥಿರತೆಗೆ ಪೂರ್ಣ ವಿರಾಮ ಬಿದ್ದಿದೆ. ಬೊಮ್ಮಾಯಿ ಬಿ.ಎಸ್.ವೈ. ಗರಡಿಯಲ್ಲಿ ಪಳಗಿದವರು. ರಾಜ್ಯದ ಜನತೆಯ ಭಾವನೆಗೆ ಸ್ಪಂದಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.