ಬೆಂಗಳೂರು: ನೂತನ ಸಿಎಂ ಆಗಿ ಸರ್ವಾನುಮತದಿಂದ ಬಸವರಾಜ್ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಲಾಗಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಈಗ ನಾನು ಸೂಪರ್ ಸಿಎಂ ಅಲ್ಲ ಎಂಬುದು ಗೊತ್ತಾಗಿರಬೇಕು. ಸಿಎಂ ಬದಲಾಗಿದ್ದರಿಂದ ನಾನು ಸೂಪರ್ ಸಿಎಂ ಟ್ಯಾಗ್ ನಿಂದ ಹೊರಗೆ ಬಂದಿದ್ದಕ್ಕೆ ಸಂತಸವಾಗಿದೆ. ಮುಂದೆ ಪಕ್ಷದಲ್ಲಿ ಅಥವಾ ಸರ್ಕಾರದಲ್ಲಿ ಕೆಲಸ ಮಾಡುವ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತೆ ಎಂದರು.
ಪುಟ್ಟ ಬಾಟಲಿಯನ್ನು ದೊಡ್ಡ ಡಬ್ಬದಲ್ಲಿ ಡೆಲಿವರಿ ಮಾಡಿದ ಅಮೆಜ಼ಾನ್
ಇನ್ನು 17 ಜನ ಶಾಸಕರು ಪಕ್ಷ ಮತ್ತು ಯಡಿಯೂರಪ್ಪನವರನ್ನು ನಂಬಿಕೊಂಡು ಬಂದವರು. ಮುಂದೆಯೂ ಅವರನ್ನು ಉತ್ತಮ ರೀತಿಯಲ್ಲಿ ಪಕ್ಷ ನಡೆಸಿಕೊಳ್ಳಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.