ಬ್ರಿಟಿಷ್ ನಟಿ ಆ್ಯಮಿ ಜಾಕ್ಸನ್ ತಮ್ಮ ನಿಶ್ಚಿತ ವರನ ಜೊತೆ ಬ್ರೇಕಪ್ ಮಾಡಿಕೊಂಡಿದ್ದಾರಾ ಎಂಬ ಪ್ರಶ್ನೆ ಬಿ ಟೌನ್ನಲ್ಲಿ ಹರಿದಾಡುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ತಮ್ಮ ನಿಶ್ಚಿತ ವರ ಜಾರ್ಜ್ ಪನಾಯೋಟೌ ಹಾಗೂ ಮಗುವಿನ ಜನನದ ಬಗ್ಗೆ ಘೋಷಣೆ ಮಾಡಿದ್ದ ಎಲ್ಲಾ ಪೋಸ್ಟ್ಗಳನ್ನೂ ಆ್ಯಮಿ ಡಿಲೀಟ್ ಮಾಡಿರೋದು ಅನುಮಾನಕ್ಕೆ ಕಾರಣವಾಗಿದೆ.
ಮೇ 2019ರಲ್ಲಿ ಜಾಂಬಿಯಾದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಆ್ಯಮಿ ಜಾಕ್ಸನ್ ಹಾಗೂ ಜಾರ್ಜ್ ಪನಾಯೋಟೌ ಜೋಡಿ ಇದೇ ವರ್ಷ ತಮ್ಮ ಪುತ್ರ ಆಂಡ್ರೆಸ್ನನ್ನ ಬರ ಮಾಡಿಕೊಂಡಿದ್ದರು. ಇದೀಗ ನಿಶ್ಚಿತ ವರನಿಗೆ ಸಂಬಂಧಿಸಿದ ಎಲ್ಲಾ ಪೋಸ್ಟ್ಗಳನ್ನೂ ನಟಿ ಡಿಲೀಟ್ ಮಾಡಿದ್ದಾರೆ.
ನಟಿ ಆ್ಯಮಿ ಜಾಕ್ಸನ್ ಸ್ಯಾಂಡಲ್ವುಡ್ನ ʼವಿಲನ್ʼ ಸಿನಿಮಾದಲ್ಲಿ ಸುದೀಪ್ ಅವರಿಗೆ ಜೋಡಿಯಾಗಿ ಕಾಣಿಸಿಕೊಳ್ಳುವ ಮೂಲಕ ಸದ್ದು ಮಾಡಿದ್ದರು.