ನವದೆಹಲಿ: ಜಮೀನಿನ ಡಿಜಿಟಲ್ ದಾಖಲೆ ಆಧರಿಸಿ(Digital Land Records) ಅಗ್ರಿ ಸ್ಟಾಕ್ ಹೆಸರಲ್ಲಿ ರಾಷ್ಟ್ರಮಟ್ಟದಲ್ಲಿ ರೈತರ ಡೇಟಾಬೇಸ್ ರಚಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಲೋಕಸಭೆಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಡೇಟಾಬೇಸ್ ರಚನೆಯಿಂದ ರೈತರಿಗೆ ವೈಯಕ್ತಿಕ ನೆಲೆಗಟ್ಟಿನಲ್ಲಿ ನೆರವು ಪಡೆದುಕೊಳ್ಳಲು ಅನುಕೂಲವಾಗಲಿದೆ. ಅಲ್ಲದೆ, ಕೃಷಿಗೆ ಸಂಬಂಧಿಸಿದಂತಹ ಯೋಜನೆ ರೂಪಿಸಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಸಹಾಯವಾಗುತ್ತದೆ ಎಂದು ತಿಳಿಸಿದ್ದಾರೆ
ಯೋಜನೆಗಳ ಪರಿಣಾಮಕಾರಿ ಅನುಷ್ಠಾನದಿಂದ ರೈತರಿಗೆ ಅನುಕೂಲವಾಗಲಿದೆ. ಅಗ್ರಿ ಸ್ಟಾಕ್ ಹೆಸರಿನಲ್ಲಿ ಜಮೀನಿನ ಡಿಜಿಟಲ್ ದಾಖಲೆಗಳನ್ನು ಆಧರಿಸಿ ಡೇಟಾ ಬೇಸ್ ರಚನೆ ಮಾಡಲಾಗುತ್ತಿದೆ. ಇದು ಇಕೋವ್ಯವಸ್ಥೆಯ ಡಿಜಿಟಲ್ ಸ್ವರೂಪವಾಗಿರುವುದರಿಂದ ಕೃಷಿ ಕ್ಷೇತ್ರದ ಕಾರ್ಯಕ್ಷಮತೆ ಹೆಚ್ಚಳಕ್ಕೆ ನೆರವಾಗಲಿದೆ ಎಂದು ಹೇಳಿದ್ದಾರೆ.